ಪೊಲೀಸ್ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ತಂತ್ರ ಖಂಡಿಸಿ ಡಿಸಿಗೆ ಮನವಿ

ಆಳಂದ:ಜೂ.1: ಸದ್ಯ ಉದ್ಬವಿಸಿರುವ ಕೋವಿಡ್ ಸಂಕಷ್ಟದ ಸಮಯದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಹಕರಿಸುವ ಬದಲು ಅವರಿಗೆ ಬ್ಲಾಕ್‍ಮೇಲ್ ಮಾಡುವ ನಿಟ್ಟಿನಲ್ಲಿ ಔಷಧಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸುವ ಬೆದರಿಕೆ ಹಾಕಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಜರುಸಬೇಕು ಎಂದು ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರು ಒತ್ತಾಯಿಸಿದರು. ಪಟ್ಟಣದಲ್ಲಿ ಸೋಮವಾರ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕೊರೊನಾ ವೈರಸ್ ಭೀತಿ ಹಾಗೂ ಹರಡಿಕೆಯಿಂದ ಜನಸಾಮಾನ್ಯರು ನಲುಗಿ ಹೋಗಿದ್ದಾರೆ. ಹೇಗಾದರು ಮಾಡಿ ಪ್ರಾಣ ಉಳಿಸಿಕೊಳ್ಳುವ ಚಿಂತೆ ಹಾಗೂ ಹೊಟ್ಟೆ ಹೇಗೆ ತುಂಬಿಸಬೇಕೆನ್ನುತ್ತಲೇ ದಿನದೊಡುತ್ತಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಆಕ್ಸಿಜನ್ ಔಷಧಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ಹೋಗಿದ್ದಾರೆ. ಎಲ್ಲರು ಕೆಲವು ಜೀವ ರಕ್ಷಕ ಔಷಧಿಗಳನ್ನು ಮೆಡಿಕಲ್‍ದಿಂದಲೇ ಖರೀದಿಸುವ ಅನಿವಾರ್ಯತೆ ಇದೆ. ಇಂತಹ ಕೋವಿಡ್ ಸಂಕಷ್ಟದಲ್ಲಿ ಯಾರದೋ ಎರಡು ಸೈಕಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದ ಮೇಲೆ ಶಾಸಕರ ಹೇಳಿದಾಗ ಸೈಕಲ್‍ಗಳನ್ನು ತೆಗೆದುಕೊಂಡು ಹೋಗಲು ಪೊಲೀಸರು ತಿಳಿಸಿರುವುದು ಗೊತ್ತಾಗಿದೆ. ಇಷ್ಟಕ್ಕೆ ವಿಷಯ ಮುಗಿಸುವ ಬದಲು ಕ್ಷುಲ್ಲಕ ಕಾರಣ ಮುಂದೆ ಮಾಡಿ ದೊಡ್ಡ ಪ್ರತಿಷ್ಠೆ ಮಾಡಿಕೊಂಡು ಔಷಧಿಯ ವ್ಯಾಪಾರಿಯೂ ನಮಗೆ ಪೊಲೀಸ್ ಅಧಿಕಾರಿಗಳು ರಾಜ ಮಾರ್ಗದೆ ಕೊಟ್ಟಿಲ್ಲ ಎಂಬ ಸೇಡು ಇಟ್ಟುಕೊಂಡು ಅಧಿಕಾರಿಗಳಿಗೆ ತಕ್ಕ ಪಾಠಕಲಿಸುತ್ತೇವೆ ಎಂದು ರೋಗಿಗಳ ಹಿತಾಶಕ್ತಿ ಕಾಪಾಡದೆ ಕೆಲವು ಮೆಡಿಕಲ್ ಅಂಗಡಿಯವರು ಸಭೆ ಸೇರಿ ರವಿವಾರ ಮಧ್ಯಾಹ್ನದವರೆಗೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

ನಂತರವು ಪ್ರತಿಭಟನೆ ಕೈಗೊಳ್ಳುವುದಕ್ಕಾಗಿ ಔಷಧಿ ಅಂಗಡಿಗಳ ಸಂಘದವರಿಂದ ಪ್ರತಿಭಟನೆ ಕುರಿತು ಮೊಬೈಲ್ ಮೂಲಕ ಸಂದೇಶ ರವಾನಿಸಿದ್ದಾರೆ. ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಯಾವೊಬ್ಬ ಔಷಧಿ ಅಂಗಡಿಯನಿಗೆ ಪೊಲೀಸ್ ಅಧಿಕಾರಿ ಹೊಡೆದಿಲ್ಲ. ಏಕವಚನದಲ್ಲಿ ಮಾತಾಡಿದ್ದಾರೆ ಎಂಬ ಕಾರಣ ಮುಂದೆ ಮಾಡಿ ಎಲ್ಲ ಔಷಧಿ ಅಂಗಡಿಗಳು ಬಂದ್ ಮಾಡಿ ಜನರ ಪ್ರಾಣದ ಜೊತೆ ಆಟ ಆಡೋವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ಔಷಧಿ ಅಂಗಡಿಯವರು ಯಾರೋ ಬಂದ್ ಮಾಡು ಎಂದರೆ ಬಂದ್ ಮಾಡುವುದು ಮತ್ತು ತೆರೆಯಬೇಕು ಎಂದಾಗ ತೆರೆಯುವುದು ಇದೆಂತ ಸಂಘ, ಯಾವ ಪುರುಷಾರ್ಥ ಎಂದು? ಪ್ರಶ್ನಿಸಿದರು.

ಮೆಡಿಕಲ್ ಅಸೋಶಿಸಿಯೇಷನ್ ಯಾರು ನಿಯಂತ್ರಿಸುತಿದ್ದಾರೆ. ಯಾರದೋ ಪ್ರತಿಷ್ಠೆಗೆ ಯಾರದೋ ಮಾತು ಕೇಳಿ ಉಹಾಪೋಹ ವದ್ದಂತಿಗಳನ್ನು ಹರಡವುದನ್ನು ಬಿಟ್ಟು ಸರ್ಕಾರ ನಿಗದಿ ಮಾಡಿದ ಸಮಯ ನಿಯಮದಂತೆ ಅಂಗಡಿ ತೆರೆದು ವ್ಯಾಪಾರ ಮಾಡಬೇಕು. ವಿನಾ ಕಾರಣ ಯಾವುದೇ ರಾಜಕೀಯ ವ್ಯಕ್ತಿಗಳ ಕೈಗೊಂಬೆ ಆಗಬಾರದು. ಔಷಧಿ ಮಾರಾಟಗಾರಿಗೆ ಅನ್ಯಾಯವಾಗಿದ್ದಾರೆ. ಅವರು ಮೇಲಾಧಿಕಾರಿಗಳಿಗೆ ದೂರ ಕೊಡಲಿ, ಆದರೆ ಅಂಗಡಿಗಳನ್ನು ಮುಚ್ಚಿ ಅಧಿಕಾರಿಗಳಿಗೆ ಪಾಠಕಲಿಸುತ್ತೇವೆ ಎಂದು ರೋಗಿಗಳ ಜೊತೆ ಚಲಾಟವಾಡುವುದು ಅಮಾನವೀಯ ಕೃತ್ಯವಾಗಿz ಎಂದು ಖಂಡಿಸಿದರು.

ಕ್ಷುಲ್ಲಕ ಕಾರಣ ಮುಂದೆ ಮಾಡಿ ಅಂಗಡಿ ಮುಚ್ಚಿಸುವರ ಹಾಗೂ ತಪ್ಪಿತಸ್ಥರ ಮೇಲೆ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು, ಯಾವುದೇ ಕಾರಣಕ್ಕೂ ಔಷಧಿ ಅಂಗಡಿಗಳು ಮುಚ್ಚುವಂತ್ತಿಲ್ಲ ಇಂಥ ಪ್ರಕರಣ ಏನಾದರ ಘಟಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.

ಔಷಧಿ ವ್ಯಾಪಾರಿ, ಹೋರಾಟಗಾರ ರಮೇಶ ಲೋಹಾರ, ಪ್ರಾಂಥ ರೈತ ಸಂಘದ ಅಧ್ಯಕ್ಷ ಪಾಂಡರಂಗ ಮಾವೀನಕರ್, ಜಿಲ್ಲಾ ಹೋರಾಟಗಾರ ಸುಧಾಮ ಧನ್ನಿ, ರಾಜಶೇಖರ ಬಸ್ಮೆ ಇನ್ನಿತರು ಉಪಸ್ಥಿತರಿದ್ದರು.