ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ತಾಕೀತುತಪ್ಪು ಮಾಡಿದವರ ಮುಖ ಅಲ್ಲ; ಕೈ ನೋಡಿ ಕ್ರಮ ಜರುಗಿಸಿ

ಕಲಬುರಗಿ ಜು 19: ‘ಯಾವುದೇ ವ್ಯಕ್ತಿ ತಪ್ಪು ಮಾಡಿದ್ದರೂ ಆತನ ಕೈ ನೋಡಿ ಕ್ರಮ ಜರುಗಿಸಬೇಕೆ ಹೊರತು; ಮುಖ ನೋಡಿ ಪ್ರಕರಣವನ್ನು ಮ್ಯಾನೇಜ್ ಮಾಡಬಾರದು’ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಪೋಲಿಸ್ ಪರೇಡ್ ಮೈದಾನದ ಸನ್ಮತಿ ಹಾಲ್‍ನಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಅವರು, ‘ತಪ್ಪು ಮಾಡಿದ ವ್ಯಕ್ತಿ ಎಷ್ಟೇ ಪ್ರಭಾವಿ ಆಗಿದ್ದರೂ ಆತನ ಮುಖನೋಡಿ ಪ್ರಕರಣ ಮುಚ್ಚಿ ಹಾಕುವುದು ಸರಿಯಲ್ಲ’ ಎಂದರು.
ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೂ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯತೋರುತ್ತಿದ್ದಾರೆ ಎಂಬ ಸುದ್ದಿಗಾರರ ಅಸಮಾಧಾನಕ್ಕೆ ಸ್ಪಂದಿಸಿದ ಅಲೋಕ್ ಕುಮಾರ್,ತಾವು ಬರುವ ಆಗಸ್ಟ್ ಕೊನೆಯ ವಾರದಲ್ಲಿ ಮತ್ತೊಮ್ಮೆ ಕಲಬುರಗಿ ಜಿಲ್ಲೆಗೆ ಭೇಟಿನೀಡುತ್ತಿದ್ದು, ಅಷ್ಟರೊಳಗೆ ಡ್ರಂಕ್ ಅಂಡ್ ಡ್ರೈವ್ ಮತ್ತು ಆಟೊರಿಕ್ಷಾಗಳಿಂದಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿರಬೇಕು ಎಂದು
ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಆಳಂದ ಗಲಭೆ ಪ್ರಕರಣ ಕುರಿತು ಪ್ರಸ್ತಾಪಿಸಿದ ಅವರು, ಸೆಕ್ಷನ್ 144 ಉಲ್ಲಂಘಿಸಿದವರವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಇಲ್ಲಿ ಒಂದೇ ಕೋಮಿನ ವ್ಯಕ್ತಿಗಳ ವಿರುದ್ಧಎಫ್‍ಐಆರ್ ದಾಖಲಾಗಿದೆ ಎಂಬುದು ಸರಿಯಲ್ಲ ಎಂದರು.ಈ ವೇಳೆ, ಮಧೆÀ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ ಕಲಬುರಗಿ ಎಸ್ಪಿ ಇಶಾ ಪಂತ್, ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಸಿಬ್ಬಂದಿ ಕೊರತೆ ಇಲ್ಲ:
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಇಲ್ಲ.ಹಾಗೆ ನೋಡಿದರೆ ಕಲಬುರಗಿ ನಗರಕ್ಕೆ ಪೊಲೀಸ್ ಆಯುಕ್ತಾಲಯ ಮಂಜೂರುಆದಾಗಿನಿಂದ ಐಪಿಎಸ್ ಅಧಿಕಾರಿಗಳನ್ನು ಹೆಚ್ಚಾಗಿ ಸೇವೆ ಒದಗಿಸಲಾಗಿದೆ. ಈ ಐಪಿಎಸ್ ಅಧಿಕಾರಿಗಳು
ತಮ್ಮ ಅಧೀನದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೋಕಾ ಕಾಯ್ದೆಯ ಪರಿಣಾಮಕಾರಿ ಜಾರಿ ಕುರಿತು ಪತ್ರಕರ್ತರು ಅನುಮಾನವ್ಯಕ್ತಪಡಿಸಿದ್ದರಿಂದ ಪ್ರತಿಕ್ರಿಯೆ ನೀಡಿದ ಅಲೋಕ್, ಹಣಕಾಸಿನ ವಿಷಯ ಬಂದಾಗ, ಕಿಡ್ನ್ಯಾಪ್ ಅಥವಾ ಡಕಾಯಿತಿಯಂತಹ ಗಂಭೀರ ಪ್ರಕರಣಗಳು ಬಂದಾಗ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದರು.
ಅಕ್ರಮ ಶಸ್ತ್ರಾಸ್ತ್ರ ಇನ್ನೂ ಇದೆ:
ಕಲಬುರಗಿ, ವಿಜಯಪುರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಈಗಲೂ ಕೆಲವರ ಬಳಿಅಕ್ರಮ ಶಸ್ತ್ರಾಸ್ತ್ರಗಳು ಇವೆ. ಈ ಕುರಿತು ತಮಗೂ ಮಾಹಿತಿಯಿದೆ. ಅಫಜಲಪುರಮತ್ತು ಚಡಚಣ ಭಾಗದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಹಾವಳಿಯಿದೆ. ಇದರ ಜೊತೆಗೆ,ಯಾವ ವ್ಯಕ್ತಿಗೆ ಶಸ್ತ್ರಾಸ್ತ್ರ ಅಗತ್ಯವಿಲ್ಲವೋ ಅಂತವರ ಬಳಿ ಇನ್ನೂ ಲೈಸನ್ಸ್‍ಸ್ಡ್‍ಗನ್‍ಗಳಿವೆ. ಈ ಕುರಿತು ಸಹ ಕಮಿಷನರ್ ರವಿಕುಮಾರ್ ಅವರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈಶಾನ್ಯ ವಲಯ ಐಜಿಪಿ ಮನಿಷ್ ಖರ್ಬಿಕರ್, ಪೊಲೀಸ್ ಕಮಿಷನರ್ ರವಿ ಕುಮಾರ್, ಕಲಬುರಗಿ ಎಸ್ಪಿಇಶಾ ಪಂತ್, ಯಾದಗಿರಿ ಎಸ್ಪಿ ವೇದಮೂರ್ತಿ, ಬೀದರ್ ಎಸ್ಪಿ ಡೆಕ್ಕಾ ಕಿಶೋರ್ ಬಾಬು, ಎಸಿಪಿಗಳಾದ
ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಅಡಿನಷಲ್ ಎಸ್ಪಿ ಪ್ರಸನ್ನ ದೇಸಾಯಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.


ಪರಾರಿ ರೌಡಿಗಳ ಮೇಲೆ ನಿಗಾ
ಕಲಬುರಗಿ ಜಿಲ್ಲೆಯಲ್ಲಿ ಕೆಲವು ನಟೋರಿಯಸ್ ರೌಡಿಗಳು ಓಡಿ ಹೋಗಿದ್ದಾರೆ. ಇಂಥವರಚಲನವಲನ ಮತ್ತು ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಇನ್ನುಯಾವುದೇ ರೌಡಿಯನ್ನು ರೌಡಿ ಪಟ್ಟಿಯಿಂದ ಕೈಬಿಟ್ಟಿಲ್ಲ. ವಿನಾಕಾರಣ ರೌಡಿಗಳನ್ನು ರೌಡಿಪಟ್ಟಿಯಿಂದ ಕೈಬಿಟ್ಟರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ಅಕ್ರಮ ಮರಳುಗಾರಿಕೆ ಕುರಿತು ಪ್ರಸ್ತಾಪಿಸಿದ ಅವರು, ಎಲ್ಲವನ್ನೂ ಪೊಲೀಸರೇಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಏಕೆಂದರೆ, ಮರಳುಗಾರಿಕೆತಡೆಗಟ್ಟುವ ನಿಟ್ಟಿನಲ್ಲಿ ಗಣಿಗಾರಿಕೆ, ಕಂದಾಯ, ಆರ್‍ಟಿಓ ಇಲಾಖೆಗಳೂ ನಮ್ಮೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕಾಗುತ್ತದೆ. ಆದಾಗ್ಯೂ, ಜೇವರ್ಗಿ ಮತ್ತು ಅಫಜಲಪುರತಾಲೂಕಿನ ಭೀಮಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ
ಬಗ್ಗೆ ತಮ್ಮ ಬಳಿ ಮಾಹಿತಿಯಿದೆ ಎಂದರು.


ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಣಿಡಿ
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಎಂಥದ್ದೇ ಕೃತ್ಯಸಂಭವಿಸಿದ ಬಳಿಕ ಗಾಯಾಳುಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಆಸ್ಪತ್ರೆಗಳುತಕ್ಷಣ ಎಂಎಲ್‍ಸಿ ರಿಪೋರ್ಟ್ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಸಲ್ಲಿಸಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ಖಡಕ್ಕಾಗಿ ನುಡಿದರು.ಕಲಬುರಗಿಯ ನೂತನ ವಿದ್ಯಾಲಯ ಕಾಲೇಜಿನ ಎದುರು ಕಳೆದ ನಾಲ್ಕೈದುದಿನಗಳ ಹಿಂದೆ ಕಾರೊಂದು ಮಧ್ಯರಾತ್ರಿ ಪಲ್ಟಿಯಾದ ಘಟನೆ ಪೊಲೀಸ್ ಇಲಾಖೆಯಗಮನಕ್ಕೆ ಇರಲಿಲ್ಲ. ಮೇಲಾಗಿ, ಕಾರಿನ ಚಾಲಕನ ನಿರ್ಲಕ್ಷ್ಯದಿಂದ ಸಾರ್ವಜನಿಕ ಆಸ್ತಿ ಹಾಳಾಗಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದರೂ, ಖಾಸಗಿ ಆಸ್ಪತ್ರೆಯವರುಪೊಲೀಸರಿಗೆ ಮಾಹಿತಿ ನೀಡುವುದನ್ನು ವಿಳಂಬ ಮಾಡಿದ್ದಾರೆ ಎಂಬ ಅಂಶವನ್ನು ಅಲೋಕ್
ಗಂಭೀರವಾಗಿ ಪರಿಗಣಿಸಿದರು. ಹಾಗಾಗಿ, ಯಾವುದೇ ಖಾಸಗಿ ಆಸ್ಪತ್ರೆ ಇಂತಹ ತಪ್ಪು ಮಾಡಿದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಇನ್ನು, ಪೊಲೀಸ್ ಇಲಾಖೆಯಲ್ಲಿಯೂ ಕೆಲವರಿದ್ದಾರೆ. ಅವರು ತಮ್ಮ ತಮ್ಮ ಹಿತಾಸಕ್ತಿಗಾಗಿ ಪ್ರಕರಣಗಳನ್ನು ಮ್ಯಾನೇಜ್ ಮಾಡಲು ಯತ್ನಿಸುತ್ತಿರುತ್ತಾರೆ. ಇಲಾಖೆಯಲ್ಲಿ ಎಲ್ಲವೂ ಸರಿಯಿದೆ ಎಂದು ನಾನು ವಾದಿಸುತ್ತಿಲ್ಲ ಎಂದು ಹಾಸ್ಯದ ದನಿಯಲ್ಲಿಯೇ ವಾಸ್ತವ ಒಪ್ಪಿಕೊಂಡರು.