ಪೊಲೀಸ್‌ ಆಯುಕ್ತರ ಹೆಸರಲ್ಲಿ ಫೇಸ್‌ಬುಕ್‌ ನಕಲಿ ಖಾತೆ

ಮಂಗಳೂರು, ಎ.2೬- ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆಯನ್ನು ತೆರೆಯಲಾಗಿದೆ. ಈ ಬಗ್ಗೆ ನಿನ್ನೆ ಮಾಹಿತಿ ನೀಡಿರುವ ಆಯುಕ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

‘ನನ್ನ ಹೆಸರು ಮತ್ತು ನನ್ನ ವೈಯಕ್ತಿಕ ವಿವರ ಸಹಿತ ಫೇಸ್‌ಬುಕ್ ನಕಲಿ ಖಾತೆಯನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಖಾತೆಯ ಮೂಲಕ ಹಣಕಾಸಿನ ನೆರವು ನೀಡುವಂತೆ ಬೇಡಿಕೆ ಬರಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ’ ಎಂದು ಪೊಲೀಸ್‌ ಆಯುಕ್ತರು ಫೇಸ್‌ಬುಕ್ ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆಯೂ ಸೈಬರ್ ಖದೀಮರು ಪೊಲೀಸ್ ಇಲಾಖೆ ಸಹಿತ ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳ ಫೇಸ್‌ಬುಕ್ ನಕಲಿ ಖಾತೆಗಳನ್ನು ಸೃಷ್ಟಿಸಿ ಮೂಲ ಖಾತೆಯಲ್ಲಿದ್ದ ಫ್ರೆಂಡ್ಸ್ ಲಿಸ್ಟ್‌ನ್ನು ತೆಗೆದು ಅವರೆಲ್ಲರಿಗೂ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ ಹಣದ ಸಹಾಯ ಮಾಡುವಂತೆ ಮನವಿ ಮಾಡಿದ ಬಗ್ಗೆ ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.