ಪೊಲೀಸ್‍ರ ಮಿಂಚಿನ ಕಾರ್ಯಚರಣೆ: 7 ಜನರ ಬಂಧನ, 4 ಪಿಸ್ತೂಲ್ ಸೇರಿ ಮಾರಕಾಸ್ತ್ರ್ರಗಳು ಜಪ್ತಿ

ಬಸವಕಲ್ಯಾಣ:ಎ.7: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳ ಮೇಲೆ ವಿಶೇಷ ನಿಗಾ ವಹಿಸಿದ ಇಲ್ಲಿಯ ಪೊಲೀಸರ ತಂಡ, ಸಮಾಜ ಘತುಕ ವ್ಯಕ್ತಿಗಳ ಮೇಲೆ ಮಿಚಿಚಿನ ಕಾರ್ಯಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4 ಪಿಸ್ತೂಲ್ ಹಾಗೂ ಚಾಕೂ, ಚೂರಿ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹುಮನಾಬಾದನ ಎಎಸ್ಪಿ ಶಿವಾಂಸು ರಾಜಪುತ್ ತಿಳಿಸಿದರು.

ನಗರದ ಸಿಪಿಐ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಾದ ಚನ್ನಬಸವಣ್ಣ ಲಂಗೋಟಿ, ಎಎಸ್ಪಿ ಮಹೇಶ ಮೇಘಣ್ಣನವರ್, ಹುಮನಾಬಾದನ ಎಎಸ್ಪಿ ಶಿವಾಂಶು ರಾಜಪೂತ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಮಂಠಾಳ ಗ್ರಾಮದಲ್ಲಿ ಕಾರ್ಯಚರಣೆ ನಡೆಸಿದ ಸಿಪಿಐ ವಿಜಯಕುಮಾರ ನೇತೃತ್ವದ ಪೊಲೀಸರ ತಂಡ, ನಡು ರಸ್ತೆ ಮೇಲೆ ಪಿಸ್ತೂಲ್, ತಲ್ವಾರ ಹಾಗೂ ಚಾಕೂಗಳನ್ನು ಹಿಡಿದಿಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಿಸಿದ 6 ಜನ ದುಷ್ಕರ್ಮಿಗಳನ್ನು ಬಂಧಿಸಿದ್ದು, ರಾಂಪೂರವಾಡಿ ಗ್ರಾಮದ ನಿವಾಸಿ ವೀರಣ್ಣ ಬೋಳಸೂರೆ, ಮಂಠಾಳ ಗ್ರಾಮದ ನಿವಾಸಿಗಳಾದ ತಿಪ್ಪಣ್ಣ ಎಳವಾರ್, ವಿನೋದರೆಡ್ಡಿ ಸಂಜೀವ್ ರೆಡ್ಡಿ, ಆಕಾಶ ಕಾಂಬಳೆ, ವಿನೋದ ಪೂಜಾರಿ ಹಾಗೂ ಇವರಿಗೆ ಪಿಸ್ತೂಲ್‍ಗಳನ್ನು ಸರಬರಾಜು ಮಾಡಿದ್ದ ಸಸ್ತಾಪೂರ ಬಂಗ್ಲಾದ ಗುಜರಾತಿ ಹೋಟೆಲ್‍ನ ಸೌಭಾನ್ ಅಬ್ದುಲ್ ಗಫೂರ್ ಮಾರಕೋಣೆ ಎನ್ನುವಾತನ್ನು ಬಂಧಿಸಿ ಅವರಿಂದ ಬಂಧಿಸಿ ಅವರಿಂದ ಮೂರು ಪಿಸ್ತೂಲ್(ಪ್ಲೇಟ್ ಗನ್), 1 ತಲ್ವಾರ್, 2 ಚಾಕೂ ಹಾಗೂ ಆರೋಪಿಗಳು ಬಳಸುತಿದ್ದ ಬೈಕ್ ಮತ್ತು ಮೊಬೈಲ್ ಫೊನ್‍ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬರುವ ಖಾನಾಪೂರ(ಬಿ) ಗ್ರಾಮದಲ್ಲಿ ವ್ಯಕ್ತಿಯೊಬ್ಬ ಅನಧಿಕೃತ ರಿವಲ್ವಾರ್ ಹಿಡಿದು ನಿಂತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಮುಡಬಿ ಠಾಣೆ ಪಿಎಸ್‍ಐ ವಿಜಯಕುಮಾರ ನಾಯಕ್ ನೇತೃತ್ವದ ಪೊಲೀಸರ ತಂಡ, ಘಾಟ ಹಿಪ್ಪರಗಾ ಗ್ರಾಮದ ನಿವಾಸಿ ಯೋಗೇಶ ಬಿರಾದಾರ ಎನ್ನುವಾತನನ್ನು ಬಂಧಿಸಿ ಆತನಿಂದ ಒಚಿದು ರಿವಲ್ವಾರ್ ಹಾಗೂ 6 ಜಿವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹುಮನಾಬಾದ ಎಎಸ್ಪಿ ಶಿವಾಂಶು ರಾಜ್‍ಪುತ್ ಅವರು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಚುನಾವಣೆ ನಡೆಸಲು ಪೊಲೀಸ್ ಇಲಾಖೆಯಿಂದ ಬೀಗಿ ಕ್ರಮ ಅನುಸರಿಸಲಾಗುತಿದ್ದು, ಸಮಾಜದಲ್ಲಿ ಅಶಾಂತಿ ವಾತವರಣ ನಿರ್ಮಾಣ ಮಾಡುವುದು, ಪುಂಡಾಟಿಕೆ ನಡೆಸುವುದು ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟನೆಗಳು, ಅಪರಾಧ ಪ್ರಕರಣಗಳು ನಡೆಸುವವರ ವಿರುದ್ಧ ಮೂಲಾಜಿಲ್ಲದೆ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೆ ವೇಳೆ ಅವರು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ನಗರ ವೃತ್ತ ಸಿಪಿಐ ರಘುವೀರಸಿಂಗ್ ಠಾಕೂರ, ಮಂಠಾಳ ಸಿಪಿಐ ವಿಜಯಕುಮಾರ, ಪಿಎಸ್‍ಐಗಳಾದ ಅಂಬ್ರೀಷ ವಾಗ್ಮೋಡೆ, ವಿಜಯಕುಮಾರ ನಾಯಕ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.