ಪೊಲೀಸ್‍ರಿಂದ ಅತಿಕ್ರಮಣ ತೆರವು ಕಾರ್ಯಚರಣೆ ಅತಿಕ್ರಮಣಕಾರರಿಗೆ ಪಿಎಸ್‍ಐ ಸಂಕನಾಳ ಖಡಕ್ ವಾರ್ನಿಂಗ್

ತಾಳಿಕೋಟೆ:ಜು.15: ಪಟ್ಟಣದ ಮುಖ್ಯರಸ್ತೆಯ ಅಕ್ಕ ಪಕ್ಕದ ಅಂಗಡಿಕಾರರು ಅಲ್ಲದೇ ಕೆಲವು ಗೂಡಾಂಗಡಿಕಾರರು ಪುಟ್‍ಪಾತ್ ಮತ್ತು ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾ ಸಾಗಿದ್ದ ಅತಿಕ್ರಮಣವನ್ನು ಪಿ.ಎಸ್.ಐ ರಾಮನಗೌಡ ಸಂಕನಾಳ ಅವರು ತಮ್ಮ ಪೊಲೀಸ್ ಸಿಬ್ಬಂದಿಗಳೊಂದಿಗೆ ಶುಕ್ರವಾರರಂದು ಬೆಳ್ಳಂಬೆಳಿಗೆ ತೆರವುಗೊಳಿಸುವದರೊಂದಿಗೆ ಅಂಗಡಿಕಾರರಿಗೆ ಖಡಕ್‍ಕ್ಕಾಗಿ ಏಚ್ಚರಿಸಿದರು.
ಅತೀ ಜನದಟ್ಟನೆ ಮತ್ತು ವಾಹನ ಸಂಚಾರವಿರುವ ಮುಖ್ಯರಸ್ತೆಗಳಾದ ಪಟ್ಟಣದ ಕಾಯಪಲ್ಲೆ ಮಾರುಕಟ್ಟೆ, ಕತ್ರಿ ಭಜಾರ, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಅಲ್ಲದೇ ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾ ಪ್ರತಾಪಸಿಂಹ ವೃತ್ತದ ವರೆಗೆ ಪುಟ್ ಪಾತ ಅತೀಕ್ರಮಿಸಿಕೊಂಡವರಿಗೆ ಅಲ್ಲದೇ ರಸ್ತೆಗೆ ಹೊಂದಿಕೊಂಡು ವ್ಯಾಪಾರ ನಡೆಸುತ್ತಿದ್ದ ಅಂಗಡಿಕಾರರಿಗೆ ಹಾಗೂ ಗೂಡಾ ಅಂಗಡಿಕಾರರಿಗೆ ಪೊಲೀಸ್‍ರು ಏಚ್ಚರಿಕೆ ನೀಡುವದರೊಂದಿಗೆ ಅತಿಕ್ರಮಿಸಿದ್ದನ್ನು ತೆರವುಗೊಳಿಸಿದರು.
ಪ್ರಮುಖ ಮುಖ್ಯರಸ್ತೆಯಾದ ವಿಠ್ಠಲ ಮಂದಿರದ ಹತ್ತಿರ ಕೆಲವರು ಕಾಯಪಲ್ಲೆ ಮಾರಾಟಗಾರರು ಎಡಭಲ ಭಾಗದಲ್ಲಿ ರಸ್ತೆಯ ಮೇಲೆ ಇಟ್ಟು ವಾಹನ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಮಾರಾಟ ಮಾಡುತ್ತಿರುವವರಿಗೆ ತಿಳಿ ಹೇಳಿದ ಪಿಎಸ್‍ಐ ಸಂಕನಾಳ ಅವರು ರಸ್ತೆಯನ್ನು ಬಿಟ್ಟು ಹಿಂದಕ್ಕೆ ಕುಳಿತುಕೊಂಡು ವ್ಯಾಪಾರ ಮಾಡಬೇಕು ಈ ರೀತಿ ಇನ್ನೊಮ್ಮೆ ರಸ್ತೆಯ ಮೇಲೆ ಕಾಯಪಲ್ಲೆ ಇಟ್ಟು ಮಾರುವದನ್ನು ಕಂಡರೆ ಕಾಯಪಲ್ಲೆ ಮಾರಾಟವನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಏಚ್ಚರಿಸಿದರು.
ಟೆಂಗಿನ ಕಾಯಿ ಮತ್ತು ಕೀರಾಣಿ ಮಾಲು ಹೊತ್ತು ತರುವ ಲಾರಿಗಳನ್ನು ಅನ್ನಲೋಡ ಮಾಡಲು ಸಮಯ ನಿಗಧಿ ಪಡಿಸಿ ಜನ ಸಂಚಾರ ವಾಹನ ಸಂಚಾರ ದಟ್ಟವಾಗಿ ತಿರುಗಾಡುವ ಸಮಯದಲ್ಲಿ ಲಾರಿಗಳನ್ನು ರಸ್ತೆಯ ಮೇಲೆ ನಿಲ್ಲಿಸಬೇಡಿ ಎಂದು ಟೆಂಗಿನ ಕಾಯಿ ವ್ಯಾಪಾರಸ್ಥರಿಗೆ ಹಾಗೂ ಕಿರಾಣಿ ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡಿದ ಪಿಎಸ್‍ಐ ಸಂಕನಾಳ ಅವರು ಇನ್ನೂ ಮುಂದೆ ರಸ್ತೆಯ ಮೇಲೆ ಹಗಲು ಸಮಯದಲ್ಲಿ ಲಾರಿ ನಿಲ್ಲಿಸಿದ್ದು ಕಂಡುಬಂದಲ್ಲಿ ನಿರ್ಧಾಕ್ಷೀಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಏಚ್ಚರಿಸಿದರು.
ಇನ್ನೂ ಮಹಾರಾಣಾಪ್ರತಾಪಸಿಂಹ ವೃತ್ತದ ಹತ್ತಿರ ಕಾರು, ಬೈಕುಗಳು ಬೇಕಾಬಿಟ್ಟಿಯಾಗಿ ರಸ್ತೆಯ ಮೇಲೆ ನಿಲ್ಲಿಸಿದ್ದನ್ನು ಕಂಡು ಕೆಲವು ವಾಹನಗಳ ಹವಾ ಬಿಡುವದರೊಂದಿಗೆ ವಾಹನ ಸವಾರರಿಗೆ ಏಚ್ಚರಿಸಿದರಲ್ಲದೇ ಇನ್ನೂ ಮುಂದೆ ಬೇಕಾಬಿಟ್ಟಿ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಿದರೆ ವಾಹನಗಳನ್ನು ಸೀಜ್ ಮಾಡಬೇಕಾಗುತ್ತದೆ ಎಂದು ಏಚ್ಚರಿಸಿ ಕಳುಹಿಸಿಕೊಟ್ಟ ಘಟನೆಯು ನಡೆಯಿತು.

ಈ ತೆರವು ಕಾರ್ಯಚರಣೆಯಲ್ಲಿ ಎಎಸ್‍ಐ ಎ.ಬಿ.ರಡ್ಡಿ, ಎ.ಎಸ್‍ಐ ಎಸ್.ಎಂ.ಪಡಶೆಟ್ಟಿ, ಎಂ.ಎಸ್.ಹಿರಿಜೋಳ, ಗೀರಿಶ ಚಲವಾದಿ, ಎನ್.ಎ.ನಾಡಗೌಡ, ಆರ್.ಎಸ್.ವಡಗೇರ, ವಾಯ್.ಬಿ.ಹದಗಲ್ಲ, ರವಿ ಬಿರಾದಾರ, ಎಸ್.ಎಂ.ಕುರಿ, ಆರ್.ಎಸ್.ವಡೆಯರ, ಸಂಜೀವ ದೊಡಮನಿ, ಯಲಗುರದಪ್ಪಾ ದಾಸರ, ಹಾಗೂ ಹೋಮಗಾರ್ಡನ ಯಂಕಪ್ಪ ಗೊಲ್ಲರ ಒಳಗೊಂಡು 6 ಜನ ಸಿಬ್ಬಂದಿಗಳು ಭಾಗಿಯಾಗಿದ್ದರು.

ಕೆಲವು ಅಂಗಡಿಕಾರರು ಪುಟ್‍ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದರಿಂದ ಜನರು ರಸ್ತೆಯ ಮೇಲೆ ತಿರುಗಾಡುವಂತಾಗಿತ್ತು ಇನ್ನೂ ಕೆಲವು ಸಣ್ಣಪುಟ್ಟ ವ್ಯಾಪಾರಿಗಳು ರಸ್ತೆಯ ಮೇಲೆ ಇಟ್ಟು ವ್ಯಾಪಾರ ಮಾಡುತ್ತಿದ್ದರು ಅವರುಗಳಿಗೆ ಮೊದಲನೇಯದಾಗಿ ತಿಳುವಳಿಕೆ ನೀಡುವದರೊಂದಿಗೆ ಅತಿಕ್ರಮಣ ತೆರವುಗೊಳಿಸಲಾಗಿದೆ ಇನ್ನೂಳಿದ ಮುಖ್ಯರಸ್ತೆಯಲ್ಲಿನ ಪುಟ್‍ಪಾತ್ ಮತ್ತು ರಸ್ತೆ ಅತಿಕ್ರಮಣ ತೆರವು ಕಾರ್ಯಚರಣೆ ಮುಂದುವರೆಯಲಿದೆ.
                                        ರಾಮನಗೌಡ ಸಂಕನಾಳ
                                        ಪಿಎಸ್‍ಐ ತಾಳಿಕೋಟೆ