ಪೊಲೀಸರ ಹೇಯ ಕೃತ್ಯ ಖಂಡಿಸಿ ರಕ್ಷಣೆ ನೀಡಲು ಆಗ್ರಹಿಸಿ ಮನವಿ

ಆಳಂದ:ಮೇ.1:ಇತ್ತೀಚಿಗೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಸರಕಾರ ಕರ್ತವ್ಯದಲ್ಲಿ ಇದ್ದಾಗ ಅಧಿಕಾರಿಗಳನ್ನು ಲೆಕ್ಕಿಸದೇ ಪೊಲೀಸರು ಹಲ್ಲೆ ಮಾಡಿದನ್ನು ಖಂಡಿಸಿ ತಾಲ್ಲೂಕು ಘಟಕದ ವತಿಯಿಂದ ಗ್ರೇಡ-2 ತಹಶೀಲ್ದಾರ ಬಸವರಾಜ ರಕ್ಕಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು ಕಳೆದ ಏ 26 ರಂದುರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಬರುವಾಗ ದಾರಿ ಮಧ್ಯೆ ಊಟವನ್ನು ಪಾರ್ಸಲ್ಲ ತೆಗೆದುಕೊಳ್ಳುವ ಸಮಯದಲ್ಲಿ ಆಗಿಮಿಸಿದ ರೋಣ ಠಾಣೆಯ ಪಿಎಸ್‍ಐ ವಿನೋದ ಕುಮಾರ ಮತ್ತು ಇವರ ವಾಹನ ಚಾಲಕರಾದ ಮಂಜುನಾಥ ವಾಲ್ಲೀಕಿ ಏಕಾ ಏಕಿ ಅವಾಚ ಶಬ್ದಗಳಿಂದ ನಿಂದಿಸಿ ಗ್ರಾಮ ಲೆಕ್ಕಿಗ ಸಂದೀಪ ರಾಮಣ್ಣನವರ ಹಾಗೂ ಬಸವರಾಜ ಮಾದರ ಇವರ ಮೇಲೆ ಹಲ್ಲೆ ಮಾಡಿದ್ದಾರೆ ಇದನ್ನು ತಾಲ್ಲೂಕು ಘಟಕವು ತ್ರೀವವಾಗಿ ಖಂಡಿಸುತ್ತಿದೆ ಇವರು ಗ್ರಾಮ ಲೆಕ್ಕಾಧಿಖಾರಿಗಳಿಗೆ ಮನ ಬಂದಂತೆ ಹೋಡೆದಿರುವುದು ಘೋರ ಅಪರಾಧ ಈ ರೀತಿ ಪ್ರಕರಣಗಳು ಕಚೇರಿಗಳಿಗೆ ಮತ್ತು ಹಳ್ಳಿಗಳಿ ಹೋಗುವುದು ಕಷ್ಟವಾಗಿದೆ ಪೋಲಿಸ್‍ರು ಯಾವುದನ್ನು ಲೆಕ್ಕಿಸದೆ ಅಮಾನವಿಯವಾಗಿ ನಡೆದುಕೊಳ್ಳುತ್ತಿರುವ ಕ್ರಮ ಖಂಡನಿಯ ಸರಕಾರ ಸೂಕ್ತ ಆದೇಶ ಹೊರಡಿಸಿ ಪೊಲೀಸ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.ಗ್ರಾಮ ಲೆಕ್ಕಿಗ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ದೇವಂತಗಿ, ಕಾರ್ಯದರ್ಶಿ, ವಿನೋದಕುಮಾರ ಹಾಗೂ ಪ್ರಭುಲಿಂಗ ತಟ್ಟಿ, ಶರಣು ಹಕ್ಕಿ, ಸುಜಾತಾ ರಾಣಿ, ಈರಮ್ಮಾ, ರಂಜಿತಾ, ಆನಂದ ಪೂಜಾರಿ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.