ಪೊಲೀಸರ ಸೋಗಿನಲ್ಲಿ ಸುಲಿಗೆ ನಾಲ್ವರು ಸೆರೆ

ಬೆಂಗಳೂರು,ಜೂ.೨-ಪೊಲೀಸರ ಸೋಗಿನಲ್ಲಿ ಸ್ಕೂಟರ್ ಜಪ್ತಿ ಮಾಡಿ ನಗದು ಮೊಬೈಲ್ ಸುಲಿಗೆ ಮಾಡಿದ್ದ ನಾಲ್ವರು ಖತರ್ನಾಕ್ ಖದೀಮರನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವೇಶ್ವರ ನಗರದ ಮಹಾಗಣಪತಿ ನಗರದ ಶರತ್ ಶೆಟ್ಟಿ (೨೫)ಮೂಡಲಪಾಳ್ಯದ ಪೂರ್ವಿಕ್ ರಾಜ್ (೨೧) ಚೋಳರ ಪಾಳ್ಯದ
ಮೋಹನ್ ಕುಮಾರ್ (೨೪) ಜಾಲಹಳ್ಳಿಯ ಅಬ್ಬಿಗೆರೆ ಫಾರೆಸ್ಟ್ ರಸ್ತೆಯ ತಪಸ್ ರಾಯ್, (೨೪)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಮೇ ೨೫ ರಂದು ಮುಂಜಾನೆ ೬-೩೦ರ ವೇಳೆ ಸ್ನೇಹಿತರೊಂದಿಗೆ
ಹೊಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ತುಮಕೂರು ರಸ್ತೆ ಕಡೆಗೆ ಹೋಗುವ ನೈಸ್ ರಸ್ತೆಯ ಕೊಮ್ಮಘಟ್ಟ ಮೇಲ್ಸೇತುವೆಯ ನಂತರ ಸ್ವಲ್ಪ ದೂರದಲ್ಲಿ ಹೋಗುತ್ತಿರುವಾಗ ಬಂಧಿತ ನಾಲ್ವರು ಆರೋಪಿಗಳು ಅಡ್ಡಗಟ್ಟಿ ನಾವು ಪೊಲೀಸರು ಲಾಕ್ ಡೌನ್ ಸಮಯದಲ್ಲಿ ಯಾಕೆ ಬೈಕ್‌ನಲ್ಲಿ ಓಡಾಡುತ್ತಿದ್ದೀರ ಎಂದು ಹೇಳಿ ಸ್ಕೂಟರ್ ನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುತ್ತೇವೆ ನಂತರ ಬಂದು ಬಿಡಿಸಿಕೊಳ್ಳಿ ಎಂದು ತಿಳಿಸಿ ಸ್ಕೂಟರ್ ತೆಗೆದುಕೊಂಡು ಹೋಗಿ ಡಿಕ್ಕಿಯಲ್ಲಿದ್ದ ವೀವೋ ಮೊಬೈಲ್ ಫೋನ್, ಎ.ಟಿ.ಎಂ ಕಾರ್ಡ್ ಆಧಾರ್ ಕಾರ್ಡ್‌ಗಳಿರುತ್ತವೆ.
ಆರೋಪಿಗಳು ದೂರುದಾರರ ಅಕೌಂಟ್‌ನಿಂದ ೯೪ ಸಾವಿರ ರೂ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರುಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್ ಸಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಆರೋಪಿಗಳನ್ನು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸ್ಕೂಟರ್ ೪೧,೦೫೦/-ರೂ ನಗದು ೨ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.