ಪೊಲೀಸರ ವಿಶೇಷ ಕಾರ್ಯಾಚರಣೆರಾತ್ರಿ ತಿರುಗುವವರಿಗೆ ಎಚ್ಚರಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.07:  ಎಸ್ಪಿ ರಂಜಿತ್ ಕುಮಾರ್ ಬಂಡಾರ್ ನ ನಿರ್ದೇಶನದಂತೆ ನಿನ್ನೆ ಸಿರುಗುಪ್ಪ ಹಾಗೂ ತೆಕ್ಕಲಕೋಟೆ ವೃತ್ತದ ಪೊಲೀಸ್  100 ಜನ ಸಿಬ್ಬಂದಿ
 14 ತಂಡಗಳನ್ನು ರಚಿಸಿ  ಬೆಳಗಿನ ಜಾವ 2 ಗಂಟೆಯವರೆಗೆ ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ಸಂಚರಿಸುವ ಹಾಗೂ ಕುಳಿತಿದ್ದ ಸಮಾರು 154 ಜನರನ್ನು  ವಶಕ್ಕೆ ತೆಗೆದುಕೊಂಡಿದೆ.
ಸಿರುಗುಪ್ಪ, ತೆಕ್ಕಲಕೋಟೆ ಪೊಲೀಸ್ ಠಾಣೆಗೆ ಹಾಗೂ ಬಳ್ಳಾರಿ ನಗರದಲ್ಲಿ ವಶಕ್ಕೆ ಪಡೆದ ಜನರನ್ನು ಡಿ.ಎ.ಆರ್. ಘಟಕ್ಕೆ ಕರೆದುಕೊಂಡು ಬಂದು ಅವರಿಗೆ ಅದರಲ್ಲಿ 129 ಜನರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಆಡಿಯಲ್ಲಿ ಪೆಟ್ಟಿ ಪ್ರಕರಣಗಳನ್ನು ದಾಖಲಿಸಿದೆ, 23 ಜನರ ಮೇಲೆ ಮಧ್ಯ ಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಐ.ಎಂ.ವಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ 12 ಜನರ ವಿರುದ್ಧ ಐ.ಎಂ.ವಿ ಸ್ಥಳ ದಂಡ ಪ್ರಕರಣಗಳನ್ನು ದಾಖಲಿಸಿಲಾಗಿದೆ.
ರಾತ್ರಿ 11 ಗಂಟೆ ನಂತರ ಅನಾವಶ್ಯಕವಾಗಿ ತಿರುಗಾಡಿದರೆ ಮುಂದಿನ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ನಿಮ್ಮ ಮೇಲೆ ರೌಡಿ ಹಾಳೆ ತೆರೆಯುವುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪುನಃ ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಾಚರಣೆಯನ್ನು ಮಾಡಲಾಗುವುದು ಆದ್ದರಿಂದ ಬಳ್ಳಾರಿ ಜಿಲ್ಲೆಯ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಮಧ್ಯ ರಾತ್ರಿ 11:00 ಗಂಟೆಯಿಂದ ಬೆಳಗಿನ ಜಾವ 06:00 ಗಂಟೆಯವರೆಗೆ ಅನಾವಶ್ಯಕವಾಗಿ ಓಡಾಡುವುದು ಮತ್ತು ಕುಳಿತುಕೊಳ್ಳುವುದು ಕಂಡು ಬಂದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಿರುತ್ತಾರೆ.

One attachment • Scanned by Gmail