ಪೊಲೀಸರ ವಿರುದ್ಧ ದೂರು-ಖಂಡನೆ

ಕೋಲಾರ,ಮೇ.೨೯: ಜಿಲ್ಲೆಯಲ್ಲಿ ಕೋರೊನ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಜಾರಿ ಘೋಷಣೆ ಮಾಡಿದ್ದು, ಅದನ್ನು ಸಮರ್ಪಕವಾಗಿ ಆನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ವಿನಾಕರಣ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಅಲ್ಪ ಸಂಖ್ಯಾತ ಕೆಲ ಮುಖಂಡರ ಕ್ರಮದ ವಿರುದ್ಧ ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ರಾಜೇಶ್ ಸಿಂಗ್ ಖಂಡಿಸಿದ್ದಾರೆ.
ವಿನಾಕರಣ ಅಲ್ಪಸಂಖ್ಯತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಕುರಿತು ಪ್ರತಿಕ್ರಯೆ ವ್ಯಕ್ತಪಡಿಸಿ ಮಾತನಾಡಿದ ರಾಜೇಶ್ ಸಿಂಗ್, ಪೊಲೀಸರು ಯಾವ ಸಮುದಾಯ, ಧರ್ಮವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿಲ್ಲ. ಕೊರೊನ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸರ ಸೇವೆಯನ್ನು ಶ್ಲಾಘಿಸಬೇಕೆ ಹೊರತು ಅವರ ವಿರುದ್ಧ ಆರೋಪ ಮಾಡುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.
ನಗರದ ಗಲ್‌ಪೇಟೆ, ನಗರ ಠಾಣೆ ವ್ಯಾಪ್ತಿಗೆ ೩೫ ವಾರ್ಡ್‌ಗಳು ಒಳಪಡುತ್ತವೆ, ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ತಡೆಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಬಹುತೇಕ ವರ್ಗಗಳಲ್ಲಿ ದುಡಿಯುವವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮುದಾಯಲ್ಲಿನ ಸ್ಥಿತಿವಂತರನ್ನು ಗುರುತಿಸಿ ಬಡವರಿಗೆ ಆಹಾರ, ತರಕಾರಿ ಕಿಟ್ ಕೊಡಿಸುವ ಪ್ರಯತ್ನ ಮಾಡಿ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳುವಷ್ಟು ಜವಾಬ್ದಾರಿಯಿಲ್ಲವೇ ಎಂದು ದೂರಿದರು.
ಅಬ್ದುಲ್ ಖಾರ್ಯ, ಜಾವೀದ್ ಉಲ್ಲಾಖಾನ್, ಅಫ್ರೋಜ್ ಪಾಷ, ಮಹಮ್ಮದ್ ಜಾಫದ್, ಬಾಬಾ ಜಾನ್, ಷರೀಫ್, ಮಹಮ್ಮದ್ ಇಕ್ಬಾಲ್ ಸಮುದಾಯದ ಜವಾಬ್ದಾರಿಯುತ ಮುಖಂಡರಾಗಿದ್ದಾರೆ. ಬಡವರ ಮೇಲೆ ಕಾಳಜಿಯಿದ್ದರೆ ಅವರ ಸಂಕಷ್ಟಕ್ಕೆ ಯಾಕೆ ಸ್ಪಂಧಿಸಬಾರದು. ಕೊರೋನ ಸೋಂಕು ನಿಯಂತ್ರಿಸುವ ಜವಬ್ದಾರಿ ಅಲ್ಪಸಂಖ್ಯಾತರ ಮೇಲಿಲ್ಲವೇ ಎಂದರು.
ನಗರಠಾಣೆ ಪಿಎಸ್‌ಐ ಅಣ್ಣಯ್ಯಪ್ಪ, ಗಲ್‌ಪೇಟೆ ಪಿಎಸ್‌ಐ ವೇದಾವತಿ, ಸಿಪಿಐ ರಂಗಸ್ವಾಮಿರವರು ತಮ್ಮ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಇವರ ಸತತ ಪ್ರಯತ್ನದಿಂದಲೇ ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಲು ಕಾರಣವಾಗಿದೆ. ಹೋಂ ಕ್ವಾರಂಟೈನ್ ಆಗಿರುವ ಸೋಂಕಿತರು ಮನೆಯಿಂದ ಹೊರಬಂದು ಓಡಾಡುತ್ತಿದ್ದಾರೆ. ದೂರು ನೀಡಿರುವ ಮುಖಂಡರ ಮನೆಗಳ ಸಮೀಪದಲ್ಲೂ ಇದ್ದಾರೆ. ಇದರ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.