ಪೊಲೀಸರ ವರ್ತನೆ ಖಂಡಿಸಿ ಪ್ರತಿಭಟನೆ

ಮೈಸೂರು,ಮಾ.23:- ಸಂಚಾರಿ ಪೆÇಲೀಸರ ತಪಾಸಣೆ ವೇಳೆ ನಿನ್ನೆ ದ್ವಿಚಕ್ರವಾಹನ ಸವಾರ ಅಯತಪ್ಪಿ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಚಾರಿ ಪೆÇಲೀಸರ ವರ್ತನೆ ಖಂಡಿಸಿ ಜೆಡಿಎಸ್ ಮುಖಂಡರು ಹಾಗೂ ನಾಗರೀಕರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ ಸವಾರ ಸಾವಿನಿಂದ ಅಕ್ರೋಶಗೊಂಡು ಪೆÇಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಮಂಜು, ಸ್ವಾಮಿನಾಯ್ಕ, ಮಾದೇಗೌಡ ಎಂಬ ಮೂವರು ಪೆÇಲೀಸರಿಂದ ಪ್ರತ್ಯೇಕ ದೂರು ಪಡೆದು ವಿಜಯನಗರ ಪೆÇಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಕುರಿತು ಸರ್ಕಾರಿ ವಾಹನ ದ್ವಂಸ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಪೆÇಲೀಸರ ವರ್ತನೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಮೈಸೂರು ಹಿನಕಲ್ ಜಂಕ್ಷನ್ ಬಳಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ಹಾಗೂ ಪೆÇಲೀಸ್ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.