ಪೊಲೀಸರ ಮೇಲೆ ಹಲ್ಲೆ, 9 ಜನರ ಬಂಧನ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.04 ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಸದಂತೆ ತಡೆಗಟ್ಟಿದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕೆಲವರು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಮೆರವಣಿಗೆಯಲ್ಲಿ ಡಿಜೆ ಬಳಸ ಕೂಡದು ಎಂಬ ಆದೇಶವಿದ್ದರೂ ಇದನ್ನು ಮೀರಿ ಡಿಜೆ ಬಳಸಲು ಮುಂದಾದ ನಾಗಲಾಪುರ ತಾಂಡಾ ಕುಮಾರ್ ನಾಯ್ಕ್ ಸೇರಿ 9 ಜನರನ್ನು ಬಂಧಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಯಲ್ಲಿ ಡಿಜಿ ಯೊಂದಿಗೆ ಗಣೇಶ್ ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಡಿಜೆ ಮತ್ತು ಟ್ಯಾಕ್ಟರ್ ವಶಪಡಿಸಿಕೊಂಡರು. ಇದರಿಂದ ಕೆರಳಿದ ತಾಂಡಾದ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಗಳು ಮತ್ತು ಪೊಲೀಸರ ಮೇಲೆ ವಾಗ್ವಾದ ನಡೆಯಿತು. ಮೆರವಣಿಗೆ ಸ್ಥಗಿತಗೊಳಿಸಿ ಗ್ರಾಮೀಣ ಠಾಣೆಯ ಬಳಿ ಧರಣಿ ನಡೆಸಿದರು. ಸ್ಥಳಕ್ಕೆ ಸಿಪಿಐ ಎಸ್ ಐ ಭೇಟಿ ನೀಡಿ ತಿಳುವಳಿಕೆ ನೀಡಿದರು .. ಈ ವೇಳೆ ಕರ್ತವ್ಯನಿರತ ರಾಮಾಂಜನೇಯ ಮತ್ತು ಸಿದ್ದೇಶ್ ಇವರ ಮೇಲೆ ಹಲ್ಲೆ ನಡೆಸಿದ್ದು. ಇಬ್ಬರು ಗಾಯಗೊಂಡಿದ್ದಾರೆ. ಕರ್ತವ್ಯನಿರತ ಪೊಲೀಸ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಂಘದ ಒಟ್ಟು 9 ಜನರ ವಿರುದ್ಧ ತಾಲೂಕಿನ ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ