ಪೊಲೀಸರ ಭರ್ಜರಿ ಬೇಟೆ ೮.೫ ಕೋಟಿ ರೂ ಡ್ರಗ್ಸ್ ಜಪ್ತಿ

ಐವರ ಸೆರೆ
ಜಯನಗರ ಮತ್ತು ವಿವಿ ಪುರಂ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ಸುಮಾರು ೮.೫೦ ಕೋಟಿ ರೂ ಬೆಲೆಯ ಹೆರಾಯಿನ್ ಅನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ವೀಕ್ಷಿಸುತ್ತಿರುವುದು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ಏ.೧೦-ಮಾದಕ ವಸ್ತುಗಳ ಸಾಗಾಣೆ ಮಾರಾಟ ಸೇವನೆ ವಿರುದ್ಧ ಸಮರ ಸಾರಿರುವ ದಕ್ಷಿಣ ವಿಭಾಗದ ಪೊಲೀಸರು
ನಟೋರಿಯಸ್ ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ೮ ಕೋಟಿ ೫೨ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಿ ಪುರಂ ಪೊಲೀಸರು ವಿದೇಶಿ ಡ್ರಗ್ಸ್ ಪೆಡ್ಲರ್ ಗಳಾದ ನೈಜೀರಿಯಾ ಮೂಲದ ಲಾರೆನ್ಸ್ ಅಲಿಯಾಸ್ ಪೀಟರ್, ಚುಕ್ವೂನೇಜಿಮ್ ಸೇರಿ ಇಬ್ಬರನ್ನು,ಜಯನಗರ ಪೊಲೀಸರು ಆಸ್ಲೇ,ಫ್ರಾಂಕ್ ಅಲಿಯಾಸ್ ಸಂಡೇ,ಇಮಾನುಯಲ್ ನಾಜಿ ಮೂವರು ಸೇರಿ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬಂಧಿತ ಲಾರೆನ್ಸ್ ಅಲಿಯಾಸ್ ಪೀಟರ್, ಚುಕ್ವೂನೇಜಿಮ್ ನಿಂದ ೧.೮೫ ಕೆ.ಜಿ ಬಿಳಿ ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ ೧.೧೫ಞg ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ ೩೧೦ ಗ್ರಾಂ ಕೊಕೇನ್ ಸೇರಿ ೭.೩೨ ಕೋಟಿಗೂ ಹೆಚ್ಚಿನ ಮೌಲ್ಯದ ಡ್ರಗ್ಸ್‌ನ್ನು ವಿವಿಪುರಂ ಪೊಲೀಸರು ಜಪ್ತಿ ಮಾಡಿದ್ದಾರೆ.ಜಯನಗರ ಪೊಲೀಸರು ಬಂಧಿತ ಆಸ್ಲೇ,ಫ್ರಾಂಕ್ ಅಲಿಯಾಸ್ ಸಂಡೇ,ಇಮಾನುಯಲ್ ನಾಜಿಯಿಂದ ೧ಕೋಟಿ ೨೦ ಲಕ್ಷ ಮೌಲ್ಯದ ೧ಕೆಜಿ ೫೪೨ ಗ್ರಾಂ ಎಂಡಿಎಂಎ,೪೦ಗ್ರಾಂ ಕೊಕೇನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಡ್ರಗ್ಸ್ ವಿರುದ್ಧ ಹಲವು ಅಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಡಿಸಿಪಿ ಕೃಷ್ಣಕಾಂತ್ ಅವರ ನೇತೃತ್ವದಲ್ಲಿ ದಕ್ಷಿಣ ವಿಭಾಗದ ಪೊಲೀಸರು ಇತ್ತಿಚೆಗೆ ಕೈಗೊಂಡ ಬಹುದೊಡ್ಡ ಮಾದಕವಸ್ತುಗಳ ಜಪ್ತಿ ಪ್ರಕರಣ ಇದಾಗಿದೆ ಎಂದರು.ಬಂಧಿತ ವಿದೇಶಿ ಡ್ರಗ್ ಫೆಡ್ಲರ್?ಗಳು ಸಾಫ್ಟ್‌ವೇರ್ ಇಂಜನಿಯರ್, ದೊಡ್ಡ ದೊಡ್ಡ ಉದ್ಯಮಿಗಳು,ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು.ನಗರದ ವಿವಿಧೆಡೆಗಳಲ್ಲಿ ಸಂಚರಿಸುತ್ತಾ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಫೆಡ್ಲರ್ಸ್‌ಗಳು ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದಾರೆ.ಇನ್ನು ಇದೇ ಮೊದಲ ಬಾರಿಗೆ ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್‌ನ್ನು ವಿವಿ ಪುರಂ ಪೊಲೀಸರು ಜಪ್ತಿ ಮಾಡಿದ್ದಾರೆ. ಇಬ್ಬರು ಫೆಡ್ಲರ್?ಗಳ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.ಆರೋಪಿ ಲಾರೆನ್ಸ್ ವಿರುದ್ಧ ತಲಘಟ್ಟಪುರದಲ್ಲಿ ಡ್ರಗ್ಸ್ ಪ್ರಕರಣ ದಾಖಲಾಗಿ ಬಂಧಿತನಾಗಿ ಕಳೆದ ಸೆಪ್ಟೆಂಬರ್ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಹೊಸಕೋಟೆಯ ಬಿದರಹಳ್ಳಿಯ ಮ್ಯಾಂಗೋ ಲೇಔಟ್ ನಲ್ಲಿ ವಾಸವಿದ್ದು ವಿವಿಪುರಂ ಠಾಣೆ ವ್ಯಾಪ್ತಿಯ ನ್ಯಾಷನಲ್ ಕಾಲೇಜ್ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ವಿವಿಪುರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದರು.ಬಂಧಿತರು ವಿದ್ಯಾರ್ಥಿ ವೀಸಾ ದಡಿ ಭಾರತಕ್ಕೆ ಬಂದಿದ್ದು ಅವರ ವೀಸಾ ಪಾಸ್ ಪೋರ್ಟ್ ಅವಧಿ ಮೂರು ವರ್ಷಗಳ ಹಿಂದೆ ಮುಗಿದಿದ್ದರೂ ಅಕ್ರಮವಾಗಿ ಗ್ರಾಮಾಂತರದಲ್ಲಿ ನೆಲೆಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿಸಿದರು.ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ವಿವಿಪುರಂ ಇನ್ಸ್‌ಪೆಕ್ಟರ್ ಮಿರ್ಜಾ ಅಲಿ ರಾಜ ಮತ್ತವರ ಸಿಬ್ಬಂದಿ ಅತಿ ದೊಡ್ಡ ಕಾರ್ಯಾಚರಣೆ ನಡೆಸಿದ್ದು ಅವರ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಡಿಸಿಪಿ ಕೃಷ್ಣಕಾಂತ್ ಅವರಿದ್ದರು.