ಪೊಲೀಸರ ದಾಳಿ : ನಾಲ್ವರು ನಕಲಿ ವೈದ್ಯರ ಬಂಧನ


ಮರಿಯಮ್ಮನಹಳ್ಳಿ, ಜೂ.11: ಖಚಿತ ಮಾಹಿತಿಯನ್ನಾಧರಿಸಿ ಹೋಬಳಿ ವ್ಯಾಪ್ತಿಯ ವೈದ್ಯಕೀಯ ಅರ್ಹತೆ ಇಲ್ಲದ ವೈದ್ಯರ ಮೇಲೆ ದಾಳಿ ಮಾಡಿದ ಮರಿಯಮ್ಮನಹಳ್ಳಿ ಪೊಲೀಸರು ಗುರುವಾರ ನಾಲ್ವರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಚಿಲಕನಹಟ್ಟಿ ಗ್ರಾಮದ ಮಲ್ಲಿಕಾರ್ಜುನ, ಸೋಮಶೇಖರ, ತಿಮ್ಮಲಾಪುರ ಗ್ರಾಮದ ಮಹೇಶ ಹಾಗೂ ಪಟ್ಟಣದ ಪಂಪಾಪತಿ ಎನ್ನುವ ನಾಲ್ವರು ಬಂಧಿತ ಆರೋಪಿ ವೈದ್ಯರಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತವಾಗಿದ್ದು, ಸೂಕ್ತ ವೈದ್ಯಕೀಯ ಪದವಿ ಪಡೆಯದೆ ಅನೇಕ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ ಸಂಬಂಧಪಟ್ಟ ಇಲಾಖೆಯ ಅನುಮತಿಯನ್ನು ಪಡೆಯದೆ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಗ್ರಾಮಗಳಲ್ಲಿ ಮನೆ ಮನೆಗಳಿಗೆ ತೆರಳಿ ಚುಚ್ಚುಮದ್ದು ನೀಡುತ್ತಿರುವ ಕುರಿತು ದೂರುಗಳು ಬಂದಿದ್ದವು.
ಈ ಹಿನ್ನಲೆಯಲ್ಲಿ ಖಚಿತ ಮಾಹಿತಿಯ ಆಧಾರದ ಮೇರೆಗೆ ಹೊಸಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಭಾಸ್ಕರ್‍ರವರು ಕೂಡ್ಲಿಗಿ ಡಿವೈಎಸ್‍ಪಿ ಹರೀಶ್‍ರ ನಿರ್ದೇಶನದ ಮೇರೆಗೆ ಪಟ್ಟಣದ ಪಿ.ಎಸ್.ಐ. ಹನುಮಂತಪ್ಪ ತಳವಾರ, ಅಪರಾಧ ವಿಭಾಗದ ಪಿ.ಎಸ್.ಐ. ಮೀನಾಕ್ಷಿ ಹಾಗೂ ಸಿಬ್ಬಂದಿಗಳ ಸಹಯೋಗದೊಂದಿಗೆ ದಾಳಿ ನಡೆಸಿ ನಾಲ್ವರು ನಕಲಿ ವೈದ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಭಾಸ್ಕರ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಆರೋಪಿತರು ಯಾರೂ ಕೂಡ ವೈದ್ಯಕೀಯ ವೃತ್ತಿ ನಡೆಸಲು ಬೇಕಾಗಿರುವ ಕನಿಷ್ಟ ವಿದ್ಯಾರ್ಹತೆಯನ್ನು ಹೊಂದಿಲ್ಲದೆ ಕೇವಲ ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಗ್ರಿ ಮುಗಿಸಿ ಚಿಕಿತ್ಸೆ ನೀಡುತ್ತಿದ್ದರು. ಕೂಡ್ಲಿಗಿ ಡಿವೈಎಸ್‍ಪಿ ಹಾಗೂ ಪಟ್ಟಣ ಪೊಲೀಸರ ಸಹಯೋಗದೊಂದಿಗೆ ದಾಳಿ ಮಾಡಿ ಆರೋಪಿತ ನಾಲ್ವರ ಮೇಲೆ ಕೆ.ಪಿ.ಎಂ.ಈ ಆ್ಯಕ್ಟ್ ಕಾಯಿದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ