ಪೊಲೀಸರ ದಾಳಿ – ಗಾಂಜಾ ಜಪ್ತಿ, ಆರೋಪಿ ಬಂಧನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.15 :-  ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ಮೇಲೆ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿಕೊಂಡು  ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೆಳ್ಳಕಟ್ಟೆ ಗೊಲ್ಲರಹಟ್ಟಿ ಗ್ರಾಮದ ಗೌರಸಮುದ್ರ ಮಾರೆಮ್ಮನ ದೇವಸ್ಥಾನ ಕಟ್ಟೆ  ಬಳಿ ಮಂಗಳವಾರ ಬೆಳಿಗ್ಗೆ ಜರುಗಿದೆ.
ಬೆಳ್ಳಕಟ್ಟೆ ಗೊಲ್ಲರಹಟ್ಟಿಯ ಸಿಗ್ಗಜ್ಜರ ಈರಣ್ಣ(45) ಬಂಧಿತ ಅರೋಪಿಯಾಗಿದ್ದಾನೆ. ಈತನು ಅನಧಿಕೃತವಾಗಿ ಗ್ರಾಮದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ  460ಗ್ರಾಂ ಗಾಂಜಾ ಹಾಗೂ ಆತನ ಬಳಿ ಗಾಂಜಾ ಮಾರಾಟದ ನಗದು ಹಣ 1200ರೂ ಜಪ್ತಿ ಮಾಡಿಕೊಂಡು  ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ತಿಳಿದಿದೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.