ಪೊಲೀಸರ ಕೊಲೆಯತ್ನ ನಡೆಸಿದವನಿಗೆ ಜೈಲುಶಿಕ್ಷೆ

ಕಲಬುರಗಿ,ಜೂ 15: ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ,ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಾಬೀತಾದ್ದರಿಂದ ನಗರದ ಮೊಮಿನಪುರದ ಗೋಳಾಚೌಕ್ ನಿವಾಸಿ ಮಹ್ಮದ್ ಜಹಿರೋದ್ದೀನ್ ಮಹ್ಮದ್ ಇಲಿಯಾಸ್ ಅಲಿಯಾಸ್ ಇಮಾಮ್ ಪಟೇಲ್ ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಾಜಿ ಬಾಬುರಾವ ಪಾಟೀಲ ಅವರು 12 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಮಹ್ಮದ್ ಜಹಿರೋದ್ದೀನ್ ಸುಲಿಗೆ ಮಾಡಿದ್ದ ಮೋಬೈಲ್‍ಗಳು ಮತ್ತು ಲ್ಯಾಪ್‍ಟಾಪ್ ತೋರಿಸಿ ಹಾಜರು ಪಡಿಸುವ ವೇಳೆ ಆತ ತನ್ನ ಚೀಲದಲ್ಲಿದ್ದ ಚಾಕುವಿನಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತೀವ್ರವಾಗಿ ಇರಿದು ಗಾಯಗೊಳಿಸಿದ್ದ.ಪೊಲೀಸ್ ಅಧಿಕಾರಿಗಳು ಶರಣಾಗಲು ನೀಡಿದ ಎಚ್ಚರಿಕೆ ಕಡೆಗಣಿಸಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ss ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಸ್ ಆರ್ ನರಸಿಂಹಲು ಅವರು ವಾದ ಮಂಡಿಸಿದ್ದರು.