
ಶಿವಮೊಗ್ಗ, ಏ. 3: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ವಿಶೇಷ
ಕಾರ್ಯಾಚರಣೆಗಳಿಗೆ ಚಾಲನೆ ನೀಡಿದೆ. ಭಾನುವಾರ ರಾತ್ರಿ ತುಂಗಾ ನಗರ ಠಾಣೆ ಪೊಲೀಸರು
ನಡೆಸಿದ ಕಾರ್ಯಾಚರಣೆ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ
ವರ್ತಿಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.
ಸಬ್ ಇನ್ಸ್’ಪೆಕ್ಟರ್ ರಘುವೀರ್ ನೇತೃತ್ವದಲ್ಲಿ ಆಲ್ಕೋಳ, ಗೋಪಾಳ, ರಾಮನಗರ,
ಮಲ್ಲಿಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ ಅಸಭ್ಯವಾಗಿ ಹಾಗೂ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ 18 ಜನರನ್ನು ವಶಕ್ಕೆ
ಪಡೆದು, ಠಾಣೆಗೆ ಕರೆತಂದಿದೆ. ಸದರಿ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಕಾಯ್ದೆಯಡಿ 7 ಹಾಗೂ ಕೋಟ್ಪಾ ಕಾಯ್ದೆಯಡಿ 8
ಪ್ರಕರಣ ದಾಖಲಿಸಿಕೊಂಡಿದ್ದಾರೆ.