ಪೊಲೀಸರ ಆಕರ್ಷಕ ಪಥ ಸಂಚಲನ

ದೇವದುರ್ಗ,ಏ.೨೧- ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಪಟ್ಟಣದ ವಿವಿಧ ಬಡಾವಣೆಯಲ್ಲಿ ಶಸ್ತ್ರಸ್ತ್ರ ಪಡೆ, ಸಿಆರ್‌ಪಿಎಫ್, ಐಟಿಬಿಪಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಗುರುವಾರ ಆಕರ್ಷಕ ಪಥ ಸಂಚಲನ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ, ಅಲ್ಲಿಂದ ಸಾರ್ವಜನಿಕ ಕ್ಲಬ್ ಮೈದಾನ, ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಕಟಕರ ಕಟ್ಟೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಾಬು ಜಗಜೀವನ್ ರಾಮ್ ವೃತ್ತ, ಬಸ್ ನಿಲ್ದಾಣ, ಜಹಿರುದ್ದೀನ್ ಸರ್ಕಲ್, ಕೆಇಬಿ ರಸ್ತೆ ಮೂಲಕ ಪುನಃ ಪೊಲೀಸ್ ಠಾಣೆವರೆಗೆ ಅದ್ದೂರಿಯಾಗಿ ಜರುಗಿತು. ಯುವಕರು, ಮುಖಂಡರು ಸೈನಿಕರಿಗೆ ಸನ್ಮಾನಿಸಿದರೆ, ಕೆಲವು ಕಡೆ ಹೂಮಳೆ ಸುರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಂ.ಎನ್.ಚೇತನಕುಮಾರ, ಉಪ ಚುನಾವಣಾಧಿಕಾರಿ ಕೆ.ವೈ.ಬಿದಿರಿ, ಪಿಐ ಕೆ.ಹೊಸಕೇರಪ್ಪ ಹಾಗೂ ಅರೆಸೇನಾ ಪಡೆಯ ಮುಖಸ್ಥರು ಇದ್ದರು.