ಪೊಲೀಸರೊಂದಿಗೆ   ಕಾಂಗ್ರೆಸ್ ಮುಖಂಡರ ವಾಗ್ವಾದ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.10: ಮಧ್ಯಾಹ್ನ  12.15 ಗಂಟೆ ಸುಮಾರಿಗೆ  ನಗರದ 34ನೇ ವಾರ್ಡಿನ ಭತ್ರಿಯ  15 ಮತ್ತು 16ನೇ  ಬೂತ್ ನಲ್ಲಿ ಪೊಲೀಸರು ಕೆ ಆರ್.ಪಿ.ಪಿ. ಮತ್ತು ಬಿಜೆಪಿ ಪಕ್ಷದವರಿಗೆ ಬೆಂಬಲ ನೀಡುತ್ತಾ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಹಾಗೂ ಮತದಾರರನ್ನು  ವಿನಾಕಾರಣ ಬೆದರಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡರು ಪೊಲೀಸರ ವಿರುದ್ದ ವಾಗ್ವಾದ ನಡೆಸಿದ ಘಟನೆ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಆಂಜನೇಯುಲು,  ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರು  ಸುನಿಲ್ ರಾವೂರು,  ವಕ್ತಾರ  ವೆಂಕಟೇಶ್ ಹೆಗಡೆ,  ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್ ಮೊದಲಾದವರು ಪೊಲೀಸರ ಕ್ರಮವನ್ನು ಖಂಡಿಸಿದರು.