ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಪಾಂಡವಪುರ: ಜು.15:- ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಅಳವಡಿಸಿರುವ ಕೇಬಲ್ ಹಾಗೋ ಮೋಟರ್‍ಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದರು ಮೇಲುಕೋಟೆ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಂಗಾಪುರ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಡೇರಿ ಕಟ್ಟಡದ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು ಮೇಲುಕೋಟೆ ಠಾಣೆ ಪೆÇಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಕಳ್ಳತನವಾಗಿದ್ದ ಗ್ರಾಮದ ಸುಮಾರು 10ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಪಂಪ್‍ಸೆಟ್‍ಗಳ ಸೇರಿದ ವಸ್ತುಗಳ ಕಳ್ಳತನವಾಗಿದೆ. ಇದೀಗಾ ಮತ್ತೆ ಹಲುವ ಕಡೆ ಕಳ್ಳತನವಾಗಿದೆ. ಆದರೆ ಪೆÇಲೀಸರು ರೈತರಿಂದ ದೂರು ಪಡೆದು ಕಳ್ಳರನ್ನು ಹಿಡಿಯಲು ಮುಂದಾಗುತ್ತಿಲ್ಲ. ಹೀಗಾಗಿ ಪೆÇಲೀಸರ ವರ್ತನೆ ಬಗ್ಗೆ ನಮಗೆ ಅನುಮಾನ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಒಂದು ಭಾರಿ ಕೃಷಿ ಪಂಪ್‍ಸೆಟ್ ಅಳವಡಿಸಬೇಕಾದರೆ ಸಾವಿರಾರು ಹಣ ಬೇಕು. ಪದೇ ಪದೇ ಕಳ್ಳತನವಾಗುತ್ತಿದ್ದರೆ ಜಮೀನು ಮಾರಾಟ ಮಾಡಿ ಪಂಪ್‍ಸೆಟ್‍ಗಳನ್ನು ಖರೀದಿ ಮಾಡಬೇಕಾಗುತ್ತದೆ. ಕೆಲ ರೈತರು ಸಾಲ ಮಾಡಿ ಅಳವಡಿಸಿದ್ದ ಪಂಪ್‍ಸೆಟ್‍ಗಳು ಕಳ್ಳತನವಾಗಿದೆ. ಪೆÇಲೀಸ್ ಇಲಾಖೆ ಈ ವಿಚಾರದಲ್ಲಿ ಕೈ ಕಟ್ಟಿ ಕುಳಿತಿದೆ ಎಂದು ನಮಗೆ ಭಾಸವಾಗುತ್ತಿದೆ. ಮೇಲುಕೋಟೆ ಹೋಬಳಿಯ ಸುತ್ತಮುತ್ತಲಿನ ದೇವಸ್ಥಾನಗಳು, ಜಮೀನುಗಳಲ್ಲಿ ಪಂಪ್‍ಸೆಟ್, ಕೃಷಿಯಂತ್ರೋಪಕರಣಗಳು ಹೀಗೆ ಒಂದಲ್ಲ ಒಂದು ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಕಳ್ಳರ ಒಂದು ದೊಡ್ಡ ಗುಂಪೇ ವ್ಯವಸ್ಥಿತವಾಗಿ ಕಳ್ಳತನ ಮಾಡುತ್ತಿದೆ. ಕಳ್ಳರು ಪಂಪ್‍ಸೆಟ್ ಬಳಸುವ ವೈರ್‍ಗಳ ಮೇಲ್ಪದರವನ್ನು ತೆಗೆದು ಜಮೀನಿನಲ್ಲಿ ಬಿಸಾಡಿ ಒಳಗಿನ ತಾಮ್ರವನ್ನು ಕದಿಯುತ್ತಿದ್ದಾರೆ ಎಂದು ದೂರಿದರು.
ಗುರುವಾರ ಒಂದೇ ರಾತ್ರಿಯಲ್ಲಿ ಗ್ರಾಮದ ಸಿದ್ದೇಶ್ವರ ಅವರ ಜಮೀನಿನಲ್ಲಿ 25 ಸಾವಿರ ಮೌಲ್ಯದ ಯಂತ್ರೋಪಕರಣ ಮತ್ತು ಕೇಬಲ್, ಅದೇ ರೀತಿ ನಾರಾಯಣಚಾರಿ, ಶಿವಣ್ಣ, ಜವರಶೆಟ್ಟಿ, ಅಭೀಷೇಕ್, ಕೃಷ್ಣೇಗೌಡ, ಕೆಂಪೇಗೌಡ, ಪ್ರಭು, ಪರಮೇಶ್, ಕಾಂತ, ರೋಹಿತ್, ಮಹದೇವಶೆಟ್ಟಿ, ಜವರೇಗೌಡ, ಹಾಗೂ ಬಳೇಅತ್ತಿಗುಪ್ಪೆ ಗ್ರಾಮದ ಕೃಷ್ಣಯ್ಯ ಎಂಬುವವರ ಜಮೀನಿನಲ್ಲಿ ಕಳ್ಳತನವಾಗಿದೆ. ಕಳ್ಳರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳದಿದ್ದರೆ ಇಡೀ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.