ಪೊಲೀಸರಿಗೆ ಹಣ್ಣು ಹಂಪಲು, ಬಿಸ್ಕೆಟ್, ಬೇಕರಿ ತಿನಿಸು, ನೀರಿನ ಬಾಟಲ್, ಮಾಸ್ಕ್, ವಿತರಣೆ

ಉಡುಪಿ ಜಿಲ್ಲಾ ವರ್ತಕರ ಸಂಘದಿಂದ ಕೇಳಾರ್ಕಳ್‌ಬೆಟ್ಟುವಿನ ಕೊರೋನ ಪೀಡಿತರ ಮನೆಗೆ ಹಾಗೂ ಪರಿಸರದ ೬ ಮನೆಗಳಿಗೆ ಮತ್ತು ಉಡುಪಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಹಣ್ಣು ಹಂಪಲು, ಬಿಸ್ಕೆಟ್, ಬೇಕರಿ ತಿನಿಸು, ಮಾಸ್ಕ್, ನೀರಿನ ಬಾಟಲ್ ಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ನಾಗರಾಜ್ ಅಡಿಗ, ವಿಶ್ವನಾಥ್ ಗಂಗೊಳ್ಳಿ, ಕ್ರೀಡಾ ಪಟು ಅರುಣಕಲಾ, ಅನುಶ್ರೀ, ಶ್ರೀಧರ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.