ಪೊಲೀಸರಿಗೆ ಮಾಸ್ಕ್, ಸಾನಿಟೈಸರ್ ವಿತರಣೆ

ದೇವದುರ್ಗ.ಜೂ.೦೨-ಪಟ್ಟಣದ ಸಿವಿಲ್ ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ (ಮೈಕ್ರೋಫೈನಾನ್ಸ್) ಇತ್ತೀಚೆಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ ಮಾಡಲಾಯಿತು.
ಪಿಐ ಹನುಮಂತ ಬಿ.ಸಣ್ಣಮನಿ ಕರೊನಾ ಸುರಕ್ಷಾ ಕಿಟ್ ಸ್ವೀಕರಿಸಿದರು. ಫೈನಾನ್ಸ್ ಬ್ರಾಂಚ್ ಮ್ಯಾನೇಜರ್ ಜಿ.ಪ್ರಲ್ಹಾದ್ ಮಾತನಾಡಿ, ಕರೊನಾ ತಡೆಗೆ ಆರೋಗ್ಯ ಇಲಾಖೆ ಜತೆಗೆ ಪೊಲೀಸರು ಹಗರುರಾತ್ರಿ ಶ್ರಮಿಸುತ್ತಿದ್ದಾರೆ. ಇಂಥವರ ಸೇವೆ ಗುರುತಿಸಿ ನಮ್ಮ ಸಂಸ್ಥೆಯಿಂದ ಚಿಕ್ಕ ಕೊಡುಗೆ ನೀಡಿದ್ದೇವೆ.ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ ಮಾಡಲಾಗಿದೆ ಎಂದರು.
ಮ್ಯಾನೇಜರ್ ವಿಜಯಕುಮಾರ, ಸಿಬ್ಬಂದಿಯಾದ ಮಲ್ಲಿಕಾರ್ಜುನ, ಶಂಶುದ್ದೀನ್ ಹಾಗೂ ಪೊಲೀಸರು ಇದ್ದರು.