ಪೊಲೀಸರಿಗೆ ಒನ್ ನೇಷನ್ ಒನ್ ಯೂನಿಫಾರ್ಮ್‌ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ

ಬೆಂಗಳೂರು,ಜ.17-ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಸಿಬ್ಬಂದಿಗೆ ಅನ್ವಯಾಗುವಂತಹ ಏಕರೂಪದ ಸಮವಸ್ತ್ರ(ಯೂನಿಫಾರ್ಮ್) ಪದ್ಧತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರದ ಗೃಹ ಇಲಾಖೆಯು ಏಕರೂಪದ ಸಮವಸ್ತ್ರ ಜಾರಿಗೆ ತರುವ ಸಂಬಂಧಿಸಿದಂತೆ
ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ರಾಜ್ಯ ಸರಕಾರ ಒನ್ ನೇಷನ್ ಒನ್ ಯೂನಿಫಾರ್ಮ್ ವ್ಯವಸ್ಥೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದೆ.
ಒನ್ ನೇಷನ್ ಒನ್ ಯೂನಿಫಾರ್ಮ್ ವ್ಯವಸ್ಥೆ ಜಾರಿ ಕುರಿತಂತೆ ರಾಜ್ಯ ಒಳಾಡಳಿತ ಇಲಾಖೆಯ ಪ್ರಸ್ತಾವನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಸಮ್ಮತಿ ಸೂಚಿಸಿದ್ದಾರೆ.