ಪೊಲೀಸರಿಂದ ವಾಹನ ತಪಾಸಣೆ ;ಬಿಗಿ ಕ್ರಮ

ಹರಿಹರ.ಏ.28;  ಜನತಾ ಕರ್ಫ್ಯೂ ಇಂದಿನಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಾಕಾಬಂದಿ ಹಾಕಿ ಹೋಗುವ ಬರುವ ವಾಹನಗಳನ್ನು ತಪಾಸಣೆ ಮಾಡಿ ಕಾರಣವಿಲ್ಲದೆ ಓಡಾಡುವವರಿಗೆ ವಾಹನ ಸವಾರರಿಗೆ ದಂಡ ಮತ್ತು ವಾಹನಗಳನ್ನು ಸೀಜ್ ಮಾಡುವುದಕ್ಕೆ ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಮುಂದಾದರು ಈ ವೇಳೆ ಮಾತನಾಡಿದ ಅವರು ಸರ್ಕಾರವು ಕಟ್ಟುನಿಟ್ಟಿನ ಆದೇಶ ಜರುಗಿಸಿದರು ಬೈಕ್ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿ ಕಾರ್ಯಕ್ಕೆ ನಾವು ಮಾಡುತ್ತಿದ್ದೇವೆ.ಕೋವಿಡ ಮಾರ್ಗ ಸೂಚಿಗಳ ಅನ್ವಯ ಪ್ರಕಾರ ಮದುವೆ ಮತ್ತು ಇತರೆ ಸಮಾರಂಭಗಳಿಗೆ ವಾಹನಗಳಲ್ಲಿ ತೆರಳುವವರಿಗೆ ಪರವಾನಗಿಯನ್ನು ಪಡೆದಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಇಂದು ಬೆಳಿಗ್ಗೆ 6ಗಂಟೆಯಿಂದ ಹತ್ತು ಗಂಟೆಯವರೆಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಂದಾದರೂ ಹತ್ತು ಗಂಟೆಯ ನಂತರ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ ನಮ್ಮ ಇಲಾಖೆಯ ಗಸ್ತು ವಾಹನಗಳಲ್ಲಿ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ತೆರಳಿ ತೆರೆದಿರುವ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ ಅನವಶ್ಯಕವಾಗಿ ಬೈಕ್ ಇತರೆ ವಾಹನಗಳಲ್ಲಿ ಸಂಚರಿಸುವವರಿಗೆ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ .ಕಾರಣವಿಲ್ಲದೆ ಬಂದರೆ ಮುಲಾಜಿಲ್ಲದೆ ದಂಡ ಮತ್ತು ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಬಿಸಿಲು ಮಳೆ ಎನ್ನದೆ ಪೊಲೀಸ್ ಇಲಾಖೆ ನಗರಸಭೆ ಕಂದಾಯ ಆರೋಗ್ಯ ಮತ್ತು ಇತರೆ ಇಲಾಖೆಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಹಿತ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತ ಬಂದಿದ್ದಾರೆ ಸಾರ್ವಜನಿಕರು ಹೆಮ್ಮಾರಿ ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬ ರೂ ಕೈಜೋಡಿಸಿ ಮುಕ್ತ ಮಾಡುವುದಕ್ಕೆ ಸಹಕರಿಸಬೇಕೆಂದು ಹೇಳಿದರು ಎಎಸ್ ಐ ನಾಗರಾಜ್ .ಮಲ್ಲೇಶಪ್ಪ. ಅಣ್ಣೋಜಿರಾವ್  .ಪೊಲೀಸ್ ಪೇದೆಗಳಾದ ಕರಿಯಪ್ಪ ನಿಟ್ಟೂರು .ಶಿವಪದ್ಮ ಹನುಮಂತಪ್ಪ. ಮಂಜುನಾಥ್ . ನಾಗರಾಜ್ ಸುಣಗಾರ .ದ್ವಾರಕೀಶ್ .ಸತೀಶ್ ಟಿ ವಿ .ಚಳಗೇರಿ ಮಂಜುನಾಥ್. ಕಂದಾಯ ಇಲಾಖೆಯ ಶಿರಸ್ತೇದಾರ ಚನ್ನವೀರಸ್ವಾಮಿ. ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್. ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ಹಾಗೂ ಇತರರು ಇದ್ದರು