ಪೊಲೀಸರಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ

ಕನಕಪುರ, ಮೇ ೧- ಕೋವಿಡ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತಿರುವ ಪೊಲೀಸರು, ಊಟವಿಲ್ಲದೆ ಪರದಾಡುತ್ತಿದ್ದವರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಮಾನವೀಯನ್ನು ಮೆರೆದಿದ್ದಾರೆ.
ತಾಲ್ಲೂಕಿನಲ್ಲಿ ಲಾಕ್‌ಡೌನ್ ಮಾಡಿರುವುದರಿಂದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವರು, ಅನಾಥರು ಮೂರು ದಿನಗಳಿಂದ ಊಟದ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದನ್ನು ಗಮನಿಸಿ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ.ಕೃಷ್ಣ ಅವರು ಅನ್ನ ಸಾಂಬಾರು ಪೊಟ್ಟಣ ಕಟ್ಟಿಸಿ ನಿರಾಶ್ರಿತರು ಎಲ್ಲಿದ್ದಾರೋ ಅಲ್ಲಿಗೆ ಹುಡುಕಿಕೊಂಡು ಹೋಗಿ ಅನ್ನದ ಪೊಟ್ಟಣ ವಿತರಣೆ ಮಾಡಿದರು.
ಬೀಗ ಮುದ್ರೆ: ಕೋವಿಡ್ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದ ವೈನ್‌ಸ್ಟೋರ್‌ನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ವೈನ್‌ಸ್ಟೋರ್‌ನ್ನು ಸೀಜ್ ಮಾಡಿ ಬೀಗ್ ಮುದ್ರೆ ಹಾಕಿದ್ದಾರೆ.
ಇಲ್ಲಿನ ಮೇಗಳಬೀದಿ ವಿನಾಯಕ ಬಾರ್‌ನಲ್ಲಿ ಕ್ಯಾಸಿಯರ್ ಮಾಸ್ಕ್ ಧರಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ತಹಶೀಲ್ದಾರ್ ವಿ.ಆರ್.ವಿಶ್ವನಾಥ್, ನಗರಸಭೆ ಅಧ್ಯಕ್ಷ ಮುಕ್ಬುಲ್‌ಪಾಷ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ.ಕೃಷ್ಣ ಉಲ್ಲಂಘನೆ ವಿರುದ್ದವಾಗಿ ಕಾನೂನು ಕ್ರಮ ಜರುಗಿಸಿದ್ದಾರೆ.