ಪೊಲೀಸರಿಂದ ಜನ ಜಾಗೃತಿ ಕಾರ್ಯಕ್ರಮ

ಮೈಸೂರು,ಏ.1:- ಕೋವಿಡ್-19 ನಿಯಂತ್ರಣ ಸಂಬಂಧ ಮೈಸೂರು ನಗರ ಪೆÇಲೀಸರು ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕೃಷ್ಣರಾಜ ವಿಭಾಗದ ಎ.ಸಿ.ಪಿ ಪೂರ್ಣಚಂದ್ರ ತೇಜಸ್ವಿ ಅವರ ನೇತೃತ್ವದಲ್ಲಿ ಕೃಷ್ಣರಾಜ ವಿಭಾಗದ ಪೆÇಲೀಸ್ ಠಾಣೆಗಳ ಪೆÇಲೀಸ್ ಇನ್ಸಪೆಕ್ಟರ್ ಅವರುಗಳು ಹಾಗೂ ಇತರೇ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ಸರಸ್ವತಿಪುರಂ ಪೆÇಲೀಸ್ ಠಾಣಾ ಸರಹದ್ದಿನ ಸರಸ್ವತಿ ಚಿತ್ರ ಮಂದಿರ ಬಳಿಯಿಂದ 5ನೇ ಕ್ರಾಸ್ ಮುಖಾಂತರ ಜವರೇಗೌಡ ಪಾರ್ಕ್ ಹಾಗೂ ಸರಸ್ವತಿಪುರಂ ಪೆÇಲೀಸ್ ಠಾಣೆಯವರೆಗೆ ಜನ ಜಾಗೃತಿ ಮೂಡಿಸಿದರು.
ಈ ಸಮಯದಲ್ಲಿ ಕೋವಿಡ್-19 ನಿಯಂತ್ರಣದ ಸಂ ಬಂಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಭಿತ್ತಿಪತ್ರಗಳನ್ನು ಸಾರ್ವಜನಿಕರು,ವಿತರಿಸಿದ್ದು, ಕಡ್ಡಾಯವಾಗಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ನಿರ್ವಹಿಸುವುದು, ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವ ಬಗ್ಗೆ ಸಾರ್ವ ಜನಿಕರಿಗೆ ತಿಳುವಳಿಕೆ ನೀಡಿದರಲ್ಲದೆ, ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಎಚ್ಚರಿ ಕೆಯನ್ನೂ ನೀಡಿದರು.