ಪೊಲೀಸರಿಂದ ಗೋ ರಕ್ಷಣೆ

ಬಾವಿಗೆ ಬಿದ್ದಾತನ ಜೀವ ಉಳಿಸಿದ ಪೊಲೀಸರು
ಪುತ್ತೂರು: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಆಧಾರದಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಅಕ್ರಮವಾಗಿ ಗೋಕಳ್ಳರಿಂದ ವಧೆಯಾಗುವ ಸಾಧ್ಯತೆಯಲ್ಲಿದ್ದ ವಾರಿಸುದಾರರಿಲ್ಲದ ಎರಡು ಹಸುಗಳನ್ನು ಪೊಲೀಸರು ರಕ್ಷಣೆ ಮಾಡಿದ ಘಟನೆ ಕೆದಿಲ ಗ್ರಾಮದ ಸತ್ತಿಕಲ್ಲಿನಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಎಸ್.ಐ ಜಂಬುರಾಜ್ ಮಹರಾಜ್ ಅವರ ನೇತೃತ್ವದಲ್ಲಿ ಸತ್ತಿಕಲ್ಲಿನಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಶ್ಯಾಮ ಭಟ್ ಎಂಬವರ ತೋಟದಲ್ಲಿ ಯಾರೋ ಕಟ್ಟಿ ಹಾಕಿದ ವಾರಿಸುದಾರಿಲ್ಲದ ಹಸುಗಳನ್ನು ವಶಕ್ಕೆ ಪಡೆದು ಕೊಂಡಿದ್ದರು. ಆದರೆ ಘಟನೆಗೆ ಸಂಬಂಧಿಸಿ ಯಾರೋ ಗೋ ಕಳ್ಳರು ಅಕ್ರಮವಾಗಿ ಗೋವನ್ನು ವಧೆ ಮಾಡುವ ನಿಟ್ಟಿನಲ್ಲಿ ಸಾಗಾಟ ಮಾಡಿರಬಹುದಲ್ಲದೆ ಪೊಲೀಸರು ಬರುತ್ತಿರುವ ಮಾಹಿತಿ ಅರಿತು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಗೋವುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಬಾವಿಯಲ್ಲಿ ಬಿದ್ದವನ ರಕ್ಷಣೆ: ಪೊಲೀಸರು ಹಸುಗಳನ್ನು ವಶಕ್ಕೆ ಪಡೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಬಾವಿಯಿಂದ ಬಂದ ಶಬ್ದ ಆಲಿಸಿ ನೋಡಿದಾಗ ಬಾವಿಯಲ್ಲಿ ಯುವಕನೊಬ್ಬ ಬಿದ್ದಿರುವುದು ಗಮನಕ್ಕೆ ಬಂದಿತ್ತು. ಬಳಿಕ ಆತನನ್ನು ಪೊಲೀಸರು ಮೇಲಕ್ಕೆತ್ತಿ ರಕ್ಷಣೆ ಮಾಡಿದ ಘಟನೆಯೂ ನಡೆದಿದೆ.
ಕೆದಿಲ ಗ್ರಾಮದ ಸತ್ತಿಕಲ್ಲು, ಸರೋಳಿ, ಗಡಿಯಾರ ಮುಂತಾದೆಡೆ ಅವ್ಯಾಹತವಾಗಿ ಅಕ್ರಮ ಖಸಾಯಿಕಾನೆ ಮತ್ತು ಅಕ್ರಮ ಗೋಸಾಗಾಟಗಳು ನಡೆಯುತ್ತಿದೆ. ಪೊಲೀಸರು ದಾಳಿ ಮುಂದೆ ಮೂವರು ಆರೋಪಿಗಳು ಗೋವನ್ನು ಬಲತ್ಕಾರವಾಗಿ ಅಕ್ರಮ ಸಾಗಾಟ ಮಾಡುತ್ತಿದ್ದರು. ಪೊಲೀಸರು ಬರುವ ಮಾಹಿತಿ ಅರಿತು ಗೋವನ್ನು ತೋಟದ ಜಾಗವೊಂದರಲ್ಲಿ ಕಟ್ಟಿ ಹಾಕಿ ಪರಾರಿಯಾಗಿದ್ದಾರೆ. ಪರಾರಿಯಾಗುವ ಬರದಲ್ಲಿ ಓರ್ವ ಯುವಕ ಬಾವಿಯಲ್ಲಿ ಬಿದ್ದಿದ್ದರೆನ್ನಲಾಗಿದೆ. ಆದರೆ ಆತ ರಾತ್ರಿ ನಡೆದು ಕೊಂಡು ಹೋಗುವಾಗ ಕಣ್ತಪ್ಪಿ ಬಾವಿಗೆ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಆತ ಪೊಲೀಸರಿಂದ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಬಂದಿಸುವಂತೆ ಹಿಂದು ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಕೆದಿಲ ಒತ್ತಾಯಿಸಿದ್ದಾರೆ.