ಪೊಲೀಸರನ್ನು ಕಾಡುತ್ತಿರುವ ಕೊರೊನಾ

ಬೆಂಗಳೂರು,ಏ.16-ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಪೊಲೀಸ್ ಸಿಬ್ಬಂದಿ ತತ್ತರಿಸಿದ್ದಾರೆ‌‌. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಿಬ್ಬಂದಿಯಲ್ಲಿ ಸೋಂಕು ಕಾಣಿಸುತ್ತಿರುವುದು ಕಳವಳಕಾರಿ‌‌ಯಾಗಿದೆ.
ನಗರ ಪೊಲೀಸ್ ಇಲಾಖೆಯಲ್ಲಿ ಈವರೆಗೂ 89 ಮಂದಿ‌ ಪೊಲೀಸ್ ಸಿಬ್ಬಂದಿಗೆ‌ ಸೋಂಕು ದೃಢಪಟ್ಟಿದೆ. ನಗರದ‌‌ ಎಂಟು ವಲಯಗಳಲ್ಲಿ ನಗರದ ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ‌ ತಗುಲಿದೆ‌.
ವಿಭಾಗವಾರು ಪ್ರಕರಣ : ಪಶ್ಚಿಮ ವಿಭಾಗದ ವಿವಿಧ ಠಾಣೆಯಲ್ಲಿ ಬರೋಬ್ಬರಿ 31 ಪಾಸಿಟಿವ್ ಪ್ರಕರಣ, ಪೂರ್ವ ವಿಭಾಗ 9 ಕೇಸ್, ಉತ್ತರ ವಿಭಾಗದಲ್ಲಿ ಒಂದು ಕೇಸ್ ವರದಿಯಾಗಿದೆ.
ದಕ್ಷಿಣ ವಿಭಾಗದಲ್ಲಿ 4, ಆಗ್ನೇಯ ವಿಭಾಗ 9, ವೈಟ್‌ಫೀಲ್ಡ್ 1, ಕೇಂದ್ರ ವಿಭಾಗದಲ್ಲಿ 5 ಪ್ರಕರಣ ದಾಖಲಾಗಿವೆ. ಈಶಾನ್ಯ ವಿಭಾಗ 2, ಸಿಎಆರ್ ಹೆಡ್‌ ಕ್ವಾರ್ಟರ್​ನಲ್ಲಿ 10 ಕೇಸ್ ದಾಖಲಾಗಿವೆ.