ಪೊಲೀಸಧ್ವಜ ದಿನಾಚರಣೆ

ಧಾರವಾಡ,ಏ3: ಇಂದು ಪೆÇಲೀಸ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವಿಧರರು ಸೇರಿಕೊಳ್ಳುತ್ತಿದ್ದಾರೆ. ಅವರಿಗೆ ಇಂದು ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಬೇಧವಿಲ್ಲದೆ ಬಹುತೇಕರನ್ನು ವಂಚಿಸುತ್ತಿರುವ ಸೈಬರ್ ಕ್ರೈಮ್ ಬಗ್ಗೆ ಮತ್ತು ಅಪರಾಧ ಪ್ರಕರಣಗಳನ್ನು ಶಿಕ್ಷೆಗೆ ಒಳಪಡಿಸಲು ಅಗತ್ಯವಿರುವ ಸಾಕ್ಷಿ ಸಂಗ್ರಹ, ತನಿಖೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನದ ತರಬೇತಿ ನೀಡಬೇಕೆಂದು ನಿವೃತ್ತ ಪೆÇಲೀಸ ಅಧೀಕ್ಷಕ ಎ.ಎಸ್.ಮಗೆಣ್ಣವರ ಅವರು ಹೇಳಿದರು.

ಅವರು ಧಾರವಾಡ ಪೆÇಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್ ಪಡೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೆÇಲೀಸ ಧ್ವಜ ದಿನಾಚರಣೆ ಮತ್ತು ಸೇವಾ ನೀವೃತ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದರೆ ಸಾಲದು. ಅಪರಾಧಿಗಳು ಮಾಡಿದ ಅಪರಾಧ ಸಾಬೀತು ಆಗಿ, ಅವರಿಗೆ ಶಿಕ್ಷೆ ಆಗುವವರೆಗೆ ಪಾಲೋಅಫ್ ಮಾಡಬೇಕು ಎಂದು ಅವರು ಹೇಳಿದರು.

ಸಾರ್ವಜನಿಕರ ಸಹಕಾರವಿಲ್ಲದೆ ನಮ್ಮ ಕರ್ತವ್ಯ ಪೂರ್ಣವಾಗುವುದಿಲ್ಲ. ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಸುವ್ಯವಸ್ಥೆ ಬಗ್ಗೆ ಪೆÇಲೀಸ ಇಲಾಖೆ ಕಾಳಜಿವಹಿಸುವದರಿಂದ ಜನರೊಂದಿಗೆ ಇಲಾಖೆಯ ಸಂಬಂಧ ಉತ್ತಮವಾಗಿ ಬೆಳೆಯುತ್ತದೆ ಎಂದರು.

ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ, ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ, ಜಾಗೃತಿ ಮೂಡಿಸಬೇಕು. ಸಾರ್ವಜನಿಕರೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪೆÇಲೀಸ ಇಲಾಖೆ ಬಗ್ಗೆ, ಪೆÇಲೀಸ ಕಾರ್ಯಗಳ ಬಗ್ಗೆ, ದಿನನಿತ್ಯದ ಸಾಮಾನ್ಯ ಕಾನೂನುಗಳ ಬಗ್ಗೆ ವಿಶೇಷ ಕಾರ್ಯಕ್ರಮಗಳ ಮೂಲಕ ತಿಳುವಳಿಕೆ ಮೂಡಿಸಬೇಕು ಎಂದು ಅವರು ತಿಳಿಸಿದರು.

ಪೆÇಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪೆÇಲೀಸ ಮ್ಯಾನುವಲ್ ಮನನ ಮಾಡಿಕೊಳ್ಳಬೇಕು. ಕರ್ನಾಟಕ ಪೆÇಲೀಸ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿ ಅಗತ್ಯವೆನಿಸಿದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಲಹೆಗಳನ್ನು ಪಡೆಯಬೇಕು. ಹೆಮ್ಮೆ, ಅಭಿಮಾನದಿಂದ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸಬೇಕು. ಪ್ರತಿ ಪೆÇಲೀಸ ಠಾಣೆಯಲ್ಲಿ ಅಂತಹ ಪೂರಕ ವಾತಾವರಣ ನಿರ್ಮಾಣವಾಗಬೇಕು. ಪೆÇಲೀಸ ಇಲಾಖೆಯ ಎಲ್ಲರೂ ಕೂಡಿ, ಪರಸ್ಪರ ಗೌರವ, ಅಭಿಮಾನದಿಂದ ಕರ್ತವ್ಯ ನಿರ್ವಹಿಸುವದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಿ, ಜನಸ್ನೇಹಿ ಪೆÇಲೀಸ ಆಗಲು ಸಾಧ್ಯವಿದೆ ಎಂದು ಎ.ಎಸ್.ಮಗೆಣ್ಣವರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಪೆÇಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಸ್ವಾಗತಿಸಿ, ಕಳೆದ ಸಾಲಿನ ಪೆÇಲೀಸ್ ಕಲ್ಯಾಣ ಚಟುವಟಿಕೆಗಳ ವರದಿ ಮಂಡಿಸಿದರು.
ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ನಾರಾಯಣ ಬರಮನಿ ಅವರು ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಪಥಸಂಚಲನ: ಪೆÇಲೀಸ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ , ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್.ಪಿ.ಐ. ವಿಠ್ಠಲ ಟಿ.ಕೋಕಟನೂರ ಹಾಗೂ 2ನೇ ಪರೇಡ್ ಕಮಾಂಡರ್ ಆರ್.ಎಸ್.ಗುಡನಟ್ಟಿ ಅವರ ನಾಯಕತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಪಥಸಂಚಲನದ ವಿವಿಧ ತಂಡಗಳಿಗೆ ಮಲ್ಲನಗೌಡ ಗುತ್ತರಗಿ, ಮಂಜುನಾಥ ಕುರಗೋಡ,ಆನಂದಕುಮಾರ.ಬಿ., ಮಲ್ಲಿಕಾರ್ಜುನ ನರಗುಂದ, ಕುಮಾರಿ.ಲಕ್ಷ್ಮಿ ದೇಗಿನಾಳ ಮತ್ತು ವಾಸು ರಕ್ಷೇದ ಅವರು ನೇತೃತ್ವವಹಿಸಿದ್ದರು.