ಪೊಲಿಸ್ ಠಾಣೆ ಆವರಣದಲ್ಲಿ ಪರಿಸರ ದಿನಾಚರಣೆ

ಹೊನ್ನಾಳಿ.ಜೂ.೭; ಸಾಲುಮರದ ತಿಮ್ಮಕ್ಕನ ಹಾದಿಯಲ್ಲೇ ಸಾಗುತ್ತಿರುವ ಈ ದಂಪತಿಗಳು ಗಿಡಗಳನ್ನು ತಮ್ಮ ಮಕ್ಕಳಂತೆ ಪೋಷಣೆ ಮಾಡುತ್ತ,ಎಲ್ಲರೂ ಗಿಡಗಳನ್ನು ನೆಟ್ಟು ಪರಿಸರ ಕಾಪಾಡಬೇಕೆಂಬ ಪಾಠ ಹೇಳಿರುವ ಶಾಂತರಾಜ್ ಹಾಗೂ ಶಾಂತಮ್ಮ ನಮ್ಮೆಲ್ಲರಿಗೂ ಪ್ರೇರಣೆ ಎಂದು ಡಿವೈಎಸ್ಪಿ ಸಂತೋಷ್ ಹೇಳಿದರು. ಹೊನ್ನಾಳಿ ಪೊಲೀಸ್‌ಠಾಣೆ ಆವರಣದಲ್ಲಿ ಪರಿಸರದ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ಶಾಂತರಾಜ್ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು. ವರ್ಷಕೊಮ್ಮೆ ಗಿಡ ನಡೆಟ್ಟು ಅದು ಪತ್ರಿಕೆಗಳಲ್ಲಿ ಬಂದರೆ ಅಷ್ಟಕ್ಕೇ ಸೀಮಿತವಾಗುತ್ತೇವೆ ಆದರೆ ಈ ದಂಪತಿಗಳು ವರ್ಷದ 365 ದಿನಾನೂ ಗಿಡಗಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,ನಿಜಕ್ಕೂ ಇವರೇ ಪರಿಸರ ಪ್ರೇಮಿಗಳು,ಬಿಸಿಲು ಮಳೆ,ಗಾಳಿ ಎನ್ನದೆ ಗಿಡ ನಟ್ಟು,ಅವುಗಳು ಹಾಳಾಗದಂತೆ ಬೇಲಿ ಹಾಕಿ ಆಗಾಗ್ಗೆ ಬಂದು ಅವುಗಳ ಸ್ಥಿತಿಗತಿಗಳನ್ನು ಗಿಡಗಳು ಎತ್ತರಕ್ಕೆ ಬೆಳೆಯುವವರೆಗೂ ಹಾರೈಕೆ ಮಾಡುತ್ತಿದ್ದಾರೆ ಎಂದು ದಂಪತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಸಿಪಿಐ ದೇವರಾಜ್ ಮಾತನಾಡಿ,ಸಾಲುಮರದ ತಿಮ್ಮಕ್ಕ ತಮ್ಮ ಜೀವನದ ಸಂದ್ಯಾ ಕಾಲದಲ್ಲೂ ಗಿಡಗಳನ್ನು ತಮ್ಮ ಮಕ್ಕಳಂತೆ ಪೋಷಣೆ ಮಾಡಿ,ಅವುಗಳು ಮರಗಳಾಗಿ ಬೆಳೆದು ರ‍್ಸತೆ ಇಕ್ಕೆಲಗಳಲ್ಲಿ ನೆರಳು ಬಂದು ಶುಚಿತ್ವ ಗಾಳಿ ಬೀಸಿದಾಗ ತಮ್ಮಮ ಜೀವನ ಸಾರ್ಥಕವಾಯಿತು ಎಂದು ಅಂದುಕೊಂಡಂತೆ ಇವರೂ ಸಹ ಅದೇ ಮಾರ್ಗದಲ್ಲಿ ಸಾಗುತ್ತ ಗಿಡಗಳ ಪೋಷಣೆ ಮಾಡುತ್ತಿದ್ದಾರೆ ಎಂದರು.ಇದೇ ವೇಳೆ ಶಾಂತರಾಜ್ ದಂಪತಿಗಳಿಗೆ ಕೂಡ ನೀಡಲಾಯಿತು.
ಪಿಎಸೈಗಳಾದ ಬಸವನಗೌಡ ಬಿರಾದರ್,ರಮೇಶ್,ಪ್ರಬೇಷನರಿ ಪಿಎಸೈ ಕಾಂತರಾಜ್,ಪೊಲೀಸ್ ಸಿಬ್ಬಂಧಿಗಳಾದ ಹರೀಶ್,ನಾಗರಾಜ್,ರಮೇಶ್,ವೆಂಕಟೇಶ್ ಹಾಗೂ ಇತರರು ಇದ್ದರು.