ಪೊಲಿಸ್ ಎಸ್ಕಾರ್ಟ್ ನೊಂದಿಗೆ ಹೊನ್ನಾಳಿಗೆ ಬಂದ ಆಕ್ಸಿಜನ್

ದಾವಣಗೆರೆ. ಮೇ.೧೮;  ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಆಕ್ಸಿಜನ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಪೋಲಿಸ್ ಎಸ್ಕಾರ್ಟ್ ನೊಂದಿಗೆ ಹರಿಹರದಿಂದ ಹೊನ್ನಾಳಿಗೆ ಆಕ್ಸಿಜನ್ ತರಿಸುವ ಮೂಲಕ ಸಮಯಪ್ರಜ್ಞೆ ತೊರಿದ್ದಾರೆ.ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ45 ಜನರು ಆಕ್ಸಿಜನ್ ಬೆಡ್ ನಲ್ಲಿದ್ದು ಕೇವಲ ಒಂದುವರೆ ಘಂಟೆ ಮಾತ್ರ ಆಕ್ಸಿಜನ್ ಬಾಕಿಯಿತ್ತು ಈ ಬಗ್ಗೆ ವೈದ್ಯರು ಶಾಸಕರ ಗಮನಕ್ಕೆ ತಂದಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಶಾಸಕ ರೇಣುಕಾಚಾರ್ಯ ಅಧಿಕಾರಿಗಳೊಂದಿಗೆ  ಹರಿಹರದ ದಿ ಸದರನ್ ಗ್ಯಾಸ್ ಏಜೆಸ್ಸಿಗೆ ತೆರಳಿದ್ದಾರೆ.ನಂತರ ಪೊಲೀಸ್ ಎಸ್ಕಾರ್ಟ್ ಮೂಲಕ ಹೊನ್ನಾಳಿಗೆ ಆಕ್ಸಿಜನ್ ತಂದಿದ್ದಾರೆ.ಶಾಸಕರ ಸಮಯ ಪ್ರಜ್ಞೆಗೆ ಹೊನ್ನಾಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.