ಪೊಲಾರ್ಡ್ ಸ್ಪೋಟಕ ಬ್ಯಾಟಿಂಗ್ ಮುಂಬೈಗೆ 4 ವಿಕೆಟ್‌ ರೋಚಕ ಜಯ ಅಂಬಟಿ ಆಟ ವ್ಯರ್ಥ

ನವದೆಹಲಿ, ಮೇ 1- ಕೀರನ್ ಪೊಲಾರ್ಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನರೆವನಿಂದ ಇಲ್ಲಿನ ಅರುಣ್ ಜೇಟ್ಲಿ ‌ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೈನ್ನೈ ಸೂಪರ್ ಕಿಂಗ್ ವಿರುದ್ಧ ಮುಂಬೈ ಇಂಡಿಯನ್ಸ್ ‌ನಾಲ್ಕು ವಿಕೆಟ್ ಗಳ ರೋಚಕ ಜಯ ಗಳಿಸಿತು.
ಕಡೆಗಳಿಗೆಯವರೆಗೂ ಅಪಾರ ಕುತೂಹಲ ಕೆರಳಿಸಿದ್ದ ಹೈ ವೋಲ್ಟೇಜ್ ಪಂದ್ಯದಲ್ಲಿ ಕಡೆ ಎಸೆತದಲ್ಲಿ ಅಗತ್ಯವಿದ್ದ ಎರಡು ರನ್ ಗಳಿಸುತ್ತಿದ್ದಂತೆ ಪೆವಿಲಿಯನ್ ನಲ್ಲಿ ತಂಡದ ಆಟಗಾರರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.


ಸಿಎಸ್ ಕೆ ಪರ ಅಂಬಟಿ ರಾಯುಡು ಆಡಿದ ಆಟ ವ್ಯರ್ಥವಾಯಿತು.
219 ರನ್ ಗಳ ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ಮುಂಬೈ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ರೋಚಕ ಜಯಗಳಿಸಿತು.
ಡೀ ಕಾಕ್ ಮತ್ತು ನಾಯಕ ರೋಹಿತ್ ಮೊದಲ ವಿಕೆಟ್ ಗೆ 71 ರನ್ ಸೇರಿಸಿ ಉತ್ರಮ‌ ಮುನ್ನಡೆ ದೊರಕಿಸಿಕೊಟ್ಟರು. ಕಾಕ್ 38 ಹಾಗೂ ರೋಹಿತ್ 35 ರನ್ ಗಳಿಸಿದರು. ಇದರ ಬೆನ್ನಲೇ ಸೂರ್ಯ ಕುಮಾರ್ ಔಟಾದರು.
ನಂತರ ಕೀರನ್ ಪೋಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಚೆನ್ನೈ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು ಪೊಲಾರ್ಡ್ ಕೇವಲ 17 ಎಸೆತಗಳಲ್ಲಿ ಅತ್ಯಂತ ವೇಗವಾಗಿ ಅರ್ಧ ಶತಕ ಪೂರೈಸಿದರು.
ಚೆನ್ನಾಗಿ ಇವರಿಬ್ಬರು ಇನ್ನಿಂಗ್ಸ್ ಕಟ್ಟಿದರು. 32 ರನ್ ಗಳಿಸಿದ್ದಾಗ ಕೃನಾಲ್ ಔಟಾದರು. ಹಾರ್ದಿಕ್ 16 ರನ್ ಗಳಿಸಿದರೆ, ನೀಶಂ ಶೂನ್ಯಕ್ಕೆ ನಿರ್ಗಮಿಸಿದರು.
ಆದರೆ ಕಡೆಗಳಿಗೆಯವರೆಗೂ ಪೋಲಾರ್ಡ್ ಹೋರಾಟ ನಡೆಸಿದರು. ಅವರು 68 ರನ್ ಗಳಿಸಿದ್ದಾಗ ಸಿಎಸ್ ಕೆ ಕ್ಯಾಚ್ ಕೈಚೆಲ್ಲಿತ್ತು. ಇದರ ಲಾಭ ಪಡೆದ ಪೋಲಾರ್ಡ್ ಕೇವಕ 34 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿ ಅಜೇಯ 87 ರನ್ ಬಾರಿಸಿದರು. ಪೊಲಾರ್ಡ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ‌‌ ತಂಡಕ್ಕೆ ವಿಜಯದ ಮಾಲೆ ತೊಡಿಸಿದರು.ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿಯಿತು.


ಇದಕ್ಕೂ ಮುನ್ನ ಅಂಬಟಿ ರಾಯುಡು ಸಿಡಿಲ್ಬರದ ಅಜೇಯ 72, ಮೊಯಿನ್ ಅಲಿ 58 ಹಾಗೂ ಡುಪ್ಲೆಸಿಸ್ 50 ರನ್ ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ಆರಂಭ ಉತ್ತಮವಾಗಿರಲಿಲ್ಲ. ಗಾಯಕ್ ವಾಡ್ ಹಾಗೂ ಟ್ರೆಂಟ್ ಬೌಲ್ಟ್ ಬೇಗನೆ ನಿರ್ಗಮಿಸಿದರು. ನಂತರ ಮೊಯಿನ್ ಅಲಿ ಹಾಗೂ ಡುಪ್ಲೆಸಿಸ್ ತಾಳ್ಮೆಯ ಆಟವಾಡಿದರು‌. ಮೊಯಿನ್ ಅಲಿ 33 ಎಸೆತಗಳಲ್ಲಿ ಅರ್ಧಶತಕ‌ ಪೂರೈಸಿದ ಬೆನ್ನಲ್ಲೇ ಔಟಾದರು.
ಡುಪ್ಲೆಸಿಸ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ವೇಳೆ ಬೌಲಿಂಗ್ ಮಾಡಲಿಳಿದ ಕೀರನ್ ಒಂದೇ ಓವರ್ ನಲ್ಲಿ ಡುಪ್ಲೆಸಿಸ್ ಹಾಗೂ ರೈನಾ ವಿಕೆಟ್ ಪಡೆದು ಆಘಾತ ನೀಡಿದರು.


ಈ ವೇಳೆ ಅಂಬಟಿ ರಾಯುಡು ಚೆನ್ನೈ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿದರು. ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್ ನರೆವಿನಿಂದಾ ಅಜೇಯ 72 ರನ್ ಗಸಿದರೆ, ಜಡೇಜಾ ಔಟಾಗದೆ 22 ರನ್ ಬಾರಿಸಿದರು. ಪೊಲಾರ್ಡ್ 2 ವಿಕೆಟ್ ಪಡೆದರು.