ಪೊರಕೆ ತಯಾರಿಕೆ ಕಾರ್ಖಾನೆಯಲ್ಲಿ ಬೆಂಕಿ: ಅಪಾರ ಹಾನಿ

ವಿಜಯಪುರ,ಮಾ.24-ಪೊರಕೆ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣ ಪೊರಕೆ ಬೆಂಕಿಗಾ ಹುತಿಯಾದ
ನಗರದ ಕೊಂಚಿಕೊರಮ ಓಣಿಯಲ್ಲಿ ನಡೆದಿದೆ.
ಇಲ್ಲಿನ ಗೋಳ ಗುಮ್ಮಟ ಎದುರಿಗಿರುವ ಕೊಂಚಿಕೊರಮ ಓಣಿಯ‌ ನಿವಾಸಿ ಮಳ್ಳೆಪ್ಪ ಕೊಂಚಿ ಕೊರಮ ಎಂಬುವರಿಗೆ ಸೇರಿದ ಸೆಂಧಿ ಪೊರೆಕೆ ಘಟಕ ಬೆಂಕಿಗೆ ಆಹುತಿಯಾಗಿದೆ.
ಮಾರಾಟ ಮಾಡಲು ಸೆಂಧಿ ಪೊರಕೆ ತಯಾರಿ ಇಡಲಾಗಿತ್ತು. ಅಲ್ಲಿ ತಯಾರಿಸಿದ ಪೊರಕೆಗಳೆಲ್ಲ ಬೆಂಕಿ ಗಾಹುತಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.