ಪೈ ವಿನ್ಯಾಸದಲ್ಲಿ ನಿಂತ 1512 ವಿದ್ಯಾರ್ಥಿಗಳುಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪೈ ಅಂದಾಜಿನ ದಿನಾಚರಣೆ

ಕಲಬುರಗಿ ಜು 25: ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪೈ ಅಂದಾಜಿನ ದಿನವನ್ನು ವಿನೂತನವಾಗಿ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಒಟ್ಟು 1512 ವಿದ್ಯಾರ್ಥಿಗಳು ಭಾಗವಹಿಸಿ, ಪೈ ಸಂಕೇತಾಕ್ಷರದ ವಿನ್ಯಾಸದಲ್ಲಿ ನಿಂತು ವಿನೂತನವಾಗಿ ಆಚರಿಸಿದರು.ಪ್ರಾರ್ಥನಾ ಸಭೆಯಲ್ಲಿ ಪೈ ಅಂದಾಜಿನ ದಿನ ಕುರಿತು ವಿದ್ಯಾರ್ಥಿಗಳು ಭಾಷಣ,ಗಣಿತ ತಜ್ಞರ ಉಲ್ಲೇಖ,ರಸಪ್ರಶ್ನೆ,ದಶಮಾಂಶಗಳ ಸಂಖ್ಯೆ ಹೇಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ದಿನವನ್ನು ವಿದ್ಯಾರ್ಥಿಗಳು ಸೃಜನಶೀಲತೆಯಿಂದ ಮತ್ತು ಅತಿ ಉತ್ಸಾಹದಿಂದ ಸಕ್ರಿಯವಾಗಿ ಪಾಲ್ಗೊಂಡು ಹೊಸ ಅಂದಾಜಿನಲ್ಲಿ ಆಚರಿಸಿದ್ದಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಮತ್ತು ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪಾ ಅವರು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.