ಪೈ ಅವರ ಅಗಲಿಕೆ ಪತ್ರೀಕಾ ರಂಗಕ್ಕೆ ಮಾತ್ರವಲ್ಲ, ವೈದ್ಯಕೀಯ ಶೈಕ್ಷಣಿಕ ರಂಗಕ್ಕೂ ತುಂಬಲಾರದ ನಷ್ಟ

ಹನೂರು: ಆ.01:- ಪೈ ಅವರ ಅಗಲಿಕೆ ಪತ್ರಿಕಾರಂಗಕ್ಕೆ ಮಾತ್ರವಲ್ಲದೆ ಶೈಕ್ಷಣಿಕ ರಂಗ ಮತ್ತು ವೈದ್ಯಕೀಯ ರಂಗಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕಾಮಗೆರೆ ಪ್ರಕಾಶ್ ಅಭಿಪ್ರಾಯಪಟ್ಟರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿಗೃಹದ ಆವರಣದಲ್ಲಿ ಉದಯವಾಣಿ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆಯನ್ನು ತಾಲ್ಲೂಕು ಕಾಯ9 ನಿರತ ಪತ್ರಕತ9ರ ಸಂಘ (ರಿ) ಆಯೋಜಿಸಲಾಗಿತ್ತು. ಸಭೆಯಲ್ಲಿ ಮೋಹನದಾಸ್ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ನೆರವೇರಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿದೇಶಕ ಪ್ರಕಾಶ್ ಮಾತನಾಡಿ ಮೋಹನದಾಸ್ ಪೈ ಅವರು 1969-70ರ ಅವಧಿಯಲ್ಲಿಯೇ ಉದಯವಾಣಿ ಪತ್ರಿಕೆಯನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತ ಹಲವಾರು ಪತ್ರಕರ್ತರ ಉದಯಕ್ಕೆ ಕಾರಣರಾದರು. ಇದರ ಜೊತೆಗೆ ತರಂಗ ಸೇರಿದಂತೆ ಇನ್ನಿತರ ಪಾಕ್ಷಿಕ ಹಾಗೂ ಮಾಸಿಕ ಪುರವಣಿಗಳನ್ನು ಹೊರತಂದು ಪ್ರಖ್ಯಾತಿಗಳಿಸಿದ್ದರು. ಅವರ ಅಗಲಿಕೆ ಉದಯವಾಣಿ ಸಮೂಹ ಸಂಸ್ಥೆಗೆ, ಪತ್ರಿಕಾರಂಗ, ವೈದ್ಯಕೀಯ ರಂಗ, ಶೈಕ್ಷಣಿಕ ರಂಗಕ್ಕೂ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.
ಪತ್ರಕರ್ತ ಪೆÇನ್ನಾಚಿ ಬಂಗಾರಪ್ಪ ಮಾತನಾಡಿ ಕರಾವಳಿ ಭಾಗದಲ್ಲಿ ಪತ್ರಿಕೆಯನ್ನು ಆರಂಭಿಸಿ ರಾಜ್ಯದ ಮೂಲೆ ಮೂಲೆಗೂ ಪತ್ರಿಕೆಗಳನ್ನು ತಲುಪಿಸುತ್ತ ಜನಮನದ ಜೀವನಾಡಿಯಾಗಿದ್ದರು. ಅವರು ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಉತ್ತಮ ಪತ್ರಕರ್ತರನ್ನು ಹುಟ್ಟುಹಾಕಿದ್ದರು. ಶುಕ್ರವಾರ, ಭಾನುವಾರ ಬಂದರೆ ಬೆಳ್ಳಂಬೆಳಗ್ಗೆಯೇ ಜನರು ಉದಯವಾಣಿ ಪತ್ರಿಕೆಗೆ ಟೋಕನ ಪಡೆದು ಸರದಿ ಸಾಲಿನಲ್ಲಿ ಕಾಯುವ ಮಟ್ಟಕ್ಕೆ ಪತ್ರಿಕೆಯನ್ನು ಬೆಳೆಸಿದರು. ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೆಂಕಟೇಗೌಡ, ಸಂಜೆವಾಣಿ ರವಿ, ಪುಟ್ಟಸ್ವಾಮಿ, ವಿನೋದ್, ನಿರಂಜನ್, ಅಜಿತ್, ಶಾರುಖ್‍ಖಾನ್, ಹ.ಶು.ಲಿಂಗರಾಜು ಹಾಜರಿದ್ದರು. ಗಣ್ಯರ ನಿಧನಕ್ಕೆ ಅಭಿಲಾಷ್.ಟಿ, ಮಣಗಳ್ಳಿ ಮಾದೇವ, ಶಾಗ್ಯ ನಂದೀಶ್, ಬಂಡಳ್ಳಿ ಉಸ್ಮಾನ್‍ಖಾನ್, ಮಹದೇಶ್ವರ ಬೆಟ್ಟ ಪ್ರದೀಪ್ ಕುಮಾರ್, ಕಾಂಚಳ್ಳಿ ವಿಜಯ್‍ಕುಮಾರ್, ಗುಂಡಾಪುರ ಸುರೇಶ್, ಪಟಾಸ್ ಪ್ರದೀಪ್, ಕುಮಾರ್ ದೊರೆ ಹಾಗೂ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.