
ಶ್ರೀರಂಗಪಟ್ಟಣ: ಏ.23:- ತಾಲೂಕಿನ ಪಂಪ್‍ಹೌಸ್ ವತ್ತದ ಬಳಿ ಕುಡಿಯುವ ನೀರಿನ ಪೈಪ್ ಹೊಡೆದು ಚಿಮ್ಮಿದ ನೀರು ರಸ್ತೆ ಪಾಲಾದ ಘಟನೆ ನಡೆದಿದೆ.
ಕೆಆರ್‍ಎಸ್ ಹಾಗೂ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೈಸೂರಿನ ವಾಣಿವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಸರಬರಾಜು ಮಾಡುವ ನೀರಿನ ಪೈಪ್ ಹೊಡೆದು ಆಕಾಶದೆತ್ತರಕ್ಕೆ ನೀರು ಚಿಮ್ಮಿ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಮೈಸೂರಿಗೆ ತೆರಳುವ ವಾಹನಗಳ ಮೇಲೆ ಚಿಮ್ಮಿ ನೀರು ವಾಹನ ಹಾಗೂ ಪಾದಾಚಾರಿಗಳ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.ಇದಕ್ಕೆಲ್ಲಾ ವಾಣಿವಿಲಾಸ ನೀರಿನ ಕೇಂದ್ರದ ಅಧಿಕಾರಿಗಳ ನಿರ್ಲಕ್ಷಯವೇ ಕಾರಣ ಎಂದು ಸ್ಥಳೀಯರು ದೂರಿದ್ಧಾರೆ.
ಕಲೇದ ತಿಂಗಳು ಇದೇ ರಸ್ತೆಯಲ್ಲಿ ಇದೇ ರೀತಿ ಪೈಪ್ ಹೊಡೆದು ಇಂತಹ ಘಟನೆ ಆಗಿತ್ತು.ಪದೆ ಪದೆ ಇದೇ ರೀತಿ ನಡೆಯುತ್ತಿದ್ದರೂ ಇದನ್ನು ಸರಿಪಡಿಸುವ ಕಾಳಿಜಿ ಅಧಿಕಾರಿಗಳಿಗೆ ಇಲ್ಲವೇನು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.