
ಲಿಂಗಸೂಗೂರು,ಆ.೦೧-
ಕೃಷ್ಣಾ ನದಿ ನೀರನ್ನು ರೈತರಿಗೆ ಕೃಷಿ ಚಟುವಟಿಕೆ ಸಂಬಂಧಿಸಿದಂತೆ ಬಳಕೆ ಮಾಡಲು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ ತಾಲ್ಲೂಕಿನ ಒಂದು ಲಕ್ಷ ಮೂವತ್ತು ಸಾವಿರ ಎಕರೆ ಪ್ರದೇಶದಲ್ಲಿ ನೀರುಣಿಸುವ ನಂದವಾಡಗಿ ಯೋಜನೆಯನ್ನು ಪೈಪ್ ಲೈನ್ ಮೂಲಕ ಹರಿ ನೀರಾವರಿ ಒದಗಿಸಬೇಕು ಎಂದು ಹೋರಾಟಗಾರ ರೈತರ ಚಿಂತಕ ಅಭಿವೃದ್ಧಿ ಪರ ಚಿಂತನೆ ಉಳ್ಳ ಸಮಾಜ ಸೇವೆ ಮಾಡುವ ಲಿಂಗಸುಗೂರು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಇವರು ಆಗ್ರಹಿಸಿದ್ದಾರೆ.
ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೂಷ್ಟಿಯಲ್ಲಿ ಮಾತನಾಡಿದ ಬಸವಂತರಾಯ ಕುರಿ ಅವರು ನಮ್ಮ ಬಾಗದ ನಂದವಾಡಗಿ ಏತ ನೀರಾವರಿ ಯೋಜನಾ ವ್ಯಾಪ್ತಿಯ ರೈತ ಫಲಾನುಭವಿಗಳಾದ , ೧೪ನೇ ಜೂನ್ ೨೦೧೭ ರಂದು ಅಂದಿನ ತಮ್ಮ ಸರ್ಕಾರವೇ ಯೋಜನಾ ಕಾಮಗಾರಿಗೆ ಚಾಲನೆ ನೀಡಿ, ೧೮೦೦ ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಟೆಂಡರ ಕರೆದು ಕೆಲಸ ಆರಂಭಿಸಿ, ೨೦೨೦-೨೧ರಲ್ಲಿ. ರೈತರಿಗೆ ನೀರು ತಲುಪಿಸುವ ಸಂಕಲ್ಪಮಾಡಿದ್ದು, ಆದರೆ ಇನ್ನೂ ಒಂದು ಹನಿ ನೀರು ಕೂಡಾ ಈ ಭಾಗದ ರೈತರಿಗೆ ನೀರು ಸಿಕ್ಕಿಲ್ಲಾ ೨೦೨೩ ರಲ್ಲಿ ವೇಳೆಗೆ ಇನ್ನು ರೈತರಿಗೆ ನೀರು ಕೊಡಲಾರದ್ದು, ನಿಜಕ್ಕೂ ರೈತರಿಗೆ ಇದು ಅನ್ಯಾಯವೆಂದು ಭಾವಿಸುತ್ತೇವೆ.
೯೦% ರಷ್ಟು ಕಾಮಗಾರಿ ಪೂರ್ಣಗೊಂಡರು, ನೀರು ಕೊಡುವ ಹಂತಕ್ಕೆ ಮುಟ್ಟದಿರುವದು ವಿಷಾದದ ಸಂಗತಿ. ಕರ್ನಾಟಕ ರಾಜ್ಯದ ಇತರ ಪದೇಶ ವ್ಯಾಪ್ತಿಯಲ್ಲಿ ಕೈಗೊಂಡ ಹನಿ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ. ರೈತರ ನೀರಾವರಿ ಕನಸು ಚಿದ್ರವಾಗಿರುವದು ಕಟುಸತ್ಯ
ಹಾಗಾಗಿ ಈ ಭಾಗದ ರೈತರಾದ ನಾವುಗಳು ಹನಿ ನೀರಾವರಿವನ್ನು ಒಪ್ಪುವದಿಲ್ಲ, ಬದಲಾಗಿ ಹರಿ ನೀರಾವರಿಯಾಗಿ ಪರಿವರ್ತನೆ,ಮಾಡಿ ಮಧ್ಯ ಪ್ರದೇಶ ಮಾದರಿಯಲ್ಲಿ ರೈತರಿಗೆ ನೀರನ್ನು ಶೇಖರಣೆ ಮಾಡಲು ಟ್ಯಾಂಕ ನಿರ್ಮಿಸಿ, ಸೋಲಾರ: ಪಂಪಸೆಟ್ಗಳನ್ನು ಒದಗಿಸಿ, ರೈತರಿಗೆ ಜಮೀನುಗಳಿಗೆ ನೀರಾವರಿ ಒದಗಿಸಲು ನಂದವಾಡಗಿ ಹೋರಾಟ ಸಮಿತಿಯ ಸದಸ್ಯರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಬಿ.ಮುರಾರಿ.ರಮೇಶ ಶಾಸ್ತ್ರಿ. ಶರಣಗೌಡ ಪಾಟೀಲ ಮಲ್ಲನಗೌಡ ಮಹೇಶ ಪಾಟೀಲ್ ಅಮರಾವತಿ. ಮಲ್ಲಯ್ಯ ಬಸವರಾಜ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.