ಪೈಪ್ ಲಿಕೇಜ್ ನಿಂದ ಗ್ರಾಮಗಳಲ್ಲಿ ವಾಂತಿ ಬೇಧಿ ಕಂಡುಬಂದಲ್ಲಿ ಪಿ ಡಿ ಒ ನೇರ ಹೊಣೆ : ಶಾಮಸುಂದರ ಕಾದ್ರೊಳ್ಳಿ

ಗುರುಮಠಕಲ್:ಸೆ.6: ಹದಿನೆಂಟು ಗ್ರಾಮ ಪಂಚಾಯಿತಿ ಒಳಗೊಂಡಿರುವ ಗುರುಮಠಕಲ್ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ಪೈಪ್ ಗಳು ಲಿಕೇಜ್ ನಿಂದ ಜನರಲ್ಲಿ ವಾಂತಿ ಬೇದಿ ಕಂಡುಬಂದಲ್ಲಿ ಅ ಗ್ರಾಮಗಳಿಗೆ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇರಾ ಹೊಣೆಗಾರಿಕೆ ಆಗಿರುತ್ತಾನೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಈ ವಿಷಯದ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳಿಂದ ಸುತ್ತೋಲೆ ಬಂದಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಾಮಸುಂದರ ಕಾದ್ರೊಳ್ಳಿ ರವರು ಎಚ್ಚರಿಕೆ ನೀಡಿದರು. ಕಾರ್ಯಕ್ರಮವು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಲಿಕಾ ಟ್ರಸ್ಟ್ ಹಾಗೂ ಯಾದಗಿರಿ ಜಿಲ್ಲಾ ಪಂಚಾಯತ್ ಜಲಜೀವನ ಮಿಷನ್ ಮತ್ತು ಸ್ವಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ಇರುವ ನೀರಿನ ಟ್ಯಾಂಕ್ ಗಳನ್ನು ಸುಮಾರು ಹದಿನೈದು ದಿನಗಳಿಗೊಮ್ಮೆ ಯಾದರು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆಗೊಳಿಸಿ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸುತ್ತ ಸ್ವಚ್ಛತೆಯ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಶುದ್ದವಾದ ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಯವರ ಪಾತ್ರ ಬಹುಮುಖ್ಯ ವಾದದ್ದು ಎಂದು ಹೇಳಿದರು. ಇದಕ್ಕಾಗಿ ವಾಟರ್ ಮ್ಯಾನ್ ಗಳು.ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಗ್ರಾಮಗಳಲ್ಲಿ ಇರುವ ಸಮಸ್ಯೆ ಗಳು ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳಿದರು. ದಂತಪೂರ. ಹಿಮ್ಲಾಪುರ. ಗಾಜರಕೋಟ. ಅನಪೂರ ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ವಾಂತಿ ಬೇದಿ ಪ್ರಕರಣಗಳು ಕಂಡುಬಂದ್ದಿದ್ದು ಜನರು ಅಸ್ವಸ್ಥ ಗೊಂಡಿರುವ ಪ್ರಕರಣಗಳು ದಾಖಲಾಗಿವೆ ಇಂತಹ ಪ್ರಕರಣಗಳು ಇನ್ನೂ ಮುಂದೆ ಯಾವುದೇ ಗ್ರಾಮಗಳಲ್ಲಿ ಮರಳಿ ಯಾಗದಂತೆ ನೋಡಿಕೊಳ್ಳುವದರ ಜೊತೆಗೆ ಅಗತ್ಯವಾದ ಕ್ರಮಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಬಹಳ ಇದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವೈಯಕ್ತಿಕ ಕೆಲಸಗಳಿಗೆ ರಜೆ ತೆಗೆದುಕೊಂಡು ಇದ್ದರು ಕೂಡ ಗ್ರಾಮಗಳಲ್ಲಿನ ಪಂಪ್ ಆಪರೇಟರ್ ಅವರ ಹತ್ತಿರ ವಾಗಲಿ ಮಾಹಿತಿ ತೆಗೆದು ಕೊಂಡು ಅಗತ್ಯವಾದಗ ಸಾರ್ವಜನಿಕರಿಗೆ ಮನವರಿಕೆ ಮಾಡುವುದಕೊಸ್ಕರ ಡಂಗೂರ ಮೂಲಕವಾಗಿ ತಿಳಿಸುವ ಪ್ರಯತ್ನ ಮಾಡಬೇಕು ಶುದ್ಧ ಕುಡಿಯುವ ನೀರನಪರಿಹಾರಕ್ಕಾಗಿ ಬೇಕಾಗಿರುವ ಅಗತ್ಯವಿರುವ ಸಾಮಾಗ್ರಿಗಳು ಇಲಾಖೆ ತಮಗೆ ಹೊದಗಿಸುತ್ತದೆ ಈ ಎಲ್ಲ ಅಂಶಗಳನ್ನು ಗಮದಲ್ಲಿಟ್ಟುಕೊಂಡು ಜನರಿಗೆ ಶುದ್ಧ ಕುಡಿಯುವ ನೀರು. ಗ್ರಾಮಗಳ ಸ್ವಚ್ಚತೆ. ಜನರ ಸಮಸ್ಯೆ ಗಳನ್ನು ಬಗೆಹರಿಸುವ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ವಾದದ್ದು ಎಂದು ಹೇಳಿದರು ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯತ ಯೋಜನಾಧಿಕಾರಿ ಶ್ರೀಮತಿ ಭಾರತಿ ಸಜ್ಜನ್. ಎ ಡಿ ಶರಣಪ್ಪ ಮೈಲಾರಿ. ರಾಮಚಂದ್ರ ಬಸುದೆ. ಕಲಿಕಾಟಾಟಟ್ರಸ್ಟ ಹಿರಿಯ ಸಂಯೋಜನಾಧಿಕಾರಿ ಮಂಜುನಾಥ ಧನ್ನಿ. ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ಅಂಗನವಾಡಿ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರು. ಪಂಪ್ ಆಪರೇಟರ್ ಗಳು. ತಾಲೂಕು ಪಂಚಾಯತ್ ಸಿಬ್ಬಂದಿಯವರು ಇದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.