
ಕಾಳಗಿ.ಜ.12. ಪಟ್ಟಣದ ನಿಜಶರಣ ಅಂಬಿಗರ ದೇವಸ್ಥಾನದ ಹತ್ತಿರ ಇರುವ ಸರಬರಾಜು ಮಾಡುವ ಪೈಪ್ ಒಡೆದಿದ್ದರಿಂದ ಕಳೆದ ಒಂದು ತಿಂಗಳದಿಂದ ನೀರು ಪೆÇೀಲಾಗುತ್ತಿದೆ ಎಂದು ರಾಮ ಸೇನೆ ತಾಲೂಕ ಅಧ್ಯಕ್ಷ ಕಾಳಪ್ಪ ಕರೆಮನೋರ ಆರೋಪಿಸಿದ್ದಾರೆ.
ಪಟ್ಟದ ಕೆಲವೊಂದು ವಾಡ್ರ್ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮಗಳಲ್ಲಿ ಬಿಸಿಲಿನ ಪ್ರಖರತೆ ಹಚ್ಚಿದಂತೆ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು. ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಜನ ಜಾನುವಾರುಗಳ ಸ್ಥಿತಿ ಕೇಳುವವರಿಲ್ಲದಾಗಿದೆ . ಆದರೆ ಇಲ್ಲಿ ಮಾತ್ರ ಪೈಪ್ ಒಡೆದು ಒಂದು ತಿಂಗಳು ಕಳೆದರೂ ದುರಸ್ತಿಗೆ ಮುಂದಾಗದ ಕಾರಣ ನೀರು ಹಾಳಾಗುತ್ತಿದೆ.
ಗ್ರಾಮದಲ್ಲಿ ನೀರು ಪೆÇೀಲಾಗುತ್ತಿರುವುದನ್ನು ಕಂಡು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ಇಲ್ಲಿನ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಪಟ್ಟಣದಲ್ಲಿ ನೀರಿನ ಅಭಾವ ತಲೆದೊರಿದೆ. ಆದರೆ ಇಲ್ಲಿ ಮಾತ್ರ ನೀರಿಗೆ ಅನುಕೂಲವಿದ್ದರೂ ಮಹಿಳೆಯರು ಮತ್ತು ಮಕ್ಕಳು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನೀರು ಪೆÇೀಲಾಗುವುದನ್ನು ತಡೆಯಬೇಕು ಎಂದು ಕಾಳಗಿ ತಾಲೂಕ ರಾಮ ಸೇನೆ ಅಧ್ಯಕ್ಷ ಕಾಳಪ್ಪ ಕರೆಮನೋರ ಆಗ್ರಹಿಸಿದರು.