ಪೈಪ್‍ಲೈನ್ ದುರಸ್ತಿಗೊಳಿಸದಿದ್ದರೆ ಅಧಿಕಾರಿಗಳಿಗೆ ಅದೇ ನೀರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭುಎಚ್ಚರಿಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಜು,27- ಜೆಜೆಎಂಕಾಮಗಾರಿ ನಡೆಯುವಾಗಈ ಹಿಂದೆ ಹಾಕಿದ್ದಪೈಪ್‍ಗಳು ಹೊಡೆದಿದ್ದರೂಅದನ್ನು ಸರಿಪಡಿಸದಿದ್ದರೆಅದೇಕಲುಷಿತನೀರನ್ನುಅಲ್ಲಿನ ಸೆಕ್ಟರ್ ಅಧಿಕಾರಿಗಳಿಗೆ ಕುಡಿಸುತ್ತೇವೆಎಂದುಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಬಿ.ಸದಾಶಿವ ಪ್ರಭುಅವರುಖಡಕ್ಕಾಗಿ ಎಚ್ಚರಿಸಿದರು.
ಇಲ್ಲಿನತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ  ಸೋಮವಾರ ಹಮ್ಮಿಕೊಂಡಿದ್ದಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯದಕುರಿತುತುರ್ತು ಸಭೆಯಲ್ಲಿ ಮಾತನಾಡಿದರು.
ನನ್ನಮಗನನ್ನುಕಾಲೇಜಿಗೆಅಡ್ಮಿಶನ್ ಮಾಡಿಸಲು ಶುಕ್ರವಾರಊರಿಗೆ ಹೋಗಿದ್ದೆ. ಆದರೆ, ನಂದಿಬೇವೂರುಗ್ರಾಪಂ ವ್ಯಾಪ್ತಿಯ ಕಣಿವಿಹಳ್ಳಿಯಲ್ಲಿ ಜನರಿಗೆ ವಾಂತಿ-ಭೇದಿ ಆಗಿದೆಎಂದುತಾಲೂಕುಆರೋಗ್ಯಅಧಿಕಾರಿಅವರಿಂದ ಮೆಸೆಜ್ ಬಂದತಕ್ಷಣ ನನಗೆ ತಡೆಯಲು ಆಗಲಿಲ್ಲ. ಕೂಡಲೇತಾಪಂಇಒ ಹಾಗೂ ಜಿಪಂನಯೋಜನಾ ನಿರ್ದೇಶಕರಿಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೆ.ನಂತರ ವಾಂತಿ-ಭೇದಿ ಪ್ರಕರಣದಲ್ಲಿಒಬ್ಬರಿಗೆತೀರಾಆರೋಗ್ಯ ಹದಗೆಟ್ಟಿತ್ತು.ಅವರನ್ನುದಾವಣಗೆರೆಆಸ್ಪತ್ರೆಗೆ ದಾಖಲಿಸಿ ಅಲ್ಲಿನ ಸಿಇಒರೊಂದಿಗೆ ನಿರಂತರ ಫಾಲೋಅಪ್ ಮಾಡಿದೆ.ಸದ್ಯಆರೋಗ್ಯದಲ್ಲಿಚೇತರಿಕೆಕಂಡಿದ್ದಾರೆ.ಆದರೂ ಸ್ಥಳ ಪರಿಶೀಲನೆ ಮಾಡುವತನಕ ನನಗೆ ಸಮಾಧಾನ ಆಗಲಿಲ್ಲ. ನನ್ನತಾಯಿ ಹಾಸಿಗೆ ಹಿಡಿದಿದ್ದರೂಅವರನ್ನು ನೋಡಲುಒಂದು ದಿನ ಸಿಗಲಿಲ್ಲ ಎಂದು ಭಾವುಕರಾದ ಸಿಇಒ, ರಜೆಯಲ್ಲಿದ್ದೇನೆಂದು ನಾನು ಮೊಬೈಲ್ ಸ್ವಿಚ್‍ಅಫ್ ಮಾಡಿದ್ದರೆಇಲ್ಲಿನ ಪರಿಸ್ಥಿತಿ ಏನಾಗಿರುತ್ತಿತ್ತುಎಂದು ಊಹಿಸಿಕೊಳ್ಳಿ.ಆದ್ದರಿಂದ ಭಾನುವಾರ ಸೇರಿರಜಾದಿನಗಳಲ್ಲಿಯೂ ಸಾರ್ವಜನಿಕರು ಫೋನ್ ಮಾಡಿದರೆಅಧಿಕಾರಿಗಳು ಸ್ವೀಕರಿಸಬೇಕು. ಸಮಸ್ಯೆಏನೆಂದು ಆಲಿಸಿ. ಅದನ್ನು ಬಗೆಹರಿಸಲು ಪ್ರಯತ್ನಿಸಿ.ಇಲ್ಲದಿದ್ದರೆಅಪಾಯ ನಮ್ಮ ಕಾಲಬುಡದಲ್ಲೇಇರುತ್ತದೆ.ಅದನ್ನು ಕೈಗೆ ಎತ್ತಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಗ್ರಾಪಂ ಪಿಡಿಒ, ಸ್ಥಳ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ:
ಯಾವುದೇಗ್ರಾಪಂ ವ್ಯಾಪ್ತಿಯಲ್ಲಿಯಾವುದೇ ಕಾಮಗಾರಿಗಳು ನಡೆಯುತ್ತಿದ್ದರೆಅದನ್ನುಗ್ರಾಪಂ ಪಿಡಿಒ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು.ಇಲ್ಲದಿದ್ದರೆಅಲ್ಲಿಏನಾದರೂ ಸಮಸ್ಯೆಗಳು ಉಲ್ಬಣಿಸಿದರೆ ಕಾಮಗಾರಿ ಅನುಷ್ಠಾನ ಮಾಡುವವರೇಜವಾಬ್ದಾರಿ ಹೊತ್ತುಕೊಳ್ಳಬೇಕುಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿಜಿಲ್ಲಾಎಸ್‍ಬಿಎಂಸಹಾಯಕ ನಿರ್ದೇಶಕಲಕ್ಷ್ಮೀಕಾಂತ, ಕಾರ್ಯನಿರ್ವಾಹಕಅಧಿಕಾರಿ ಕೆ.ಆರ್.ಪ್ರಕಾಶ್, ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಪಿಆರ್‍ಇಡಿ ಎಇಇ ನಾಗಪ್ಪ, ಪಂಚಾಯತ್‍ರಾಜ್ ಸಹಾಯಕ ನಿರ್ದೇಶಕವೀರಣ್ಣ ಲಕ್ಕಣ್ಣನವರ್, ಟಿಪಿಒ ನವೀನ್‍ಕುಮಾರ್, ಆರ್‍ಡಬ್ಲ್ಯುಎಸ್‍ಇಂಜಿನಿಯರ್‍ಗಳು, ಜೆಜೆಎಂನ ವಿವಿಧ ವಿಭಾಗದ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.

ನಿರ್ಧಾಕ್ಷಿಣ್ಯವಾಗಿಕ್ರಮವಂತುಕಟ್ಟಿಟ್ಟಬುತ್ತಿ
ಗುಂಡಿತೋಡಿ ನೀರುಪಡೆಯುವಪದ್ಧತಿತೊಲಗಬೇಕು. ಬಯಲು ಶೌಚ ಮಾಡದಂತೆಜಾಗೃತಿ ಮೂಡಿಸಬೇಕು. ಬಯಲು ಶೌಚ ಹೋಗುವುದುಎಲ್ಲೆಲ್ಲಿ ಹೆಚ್ಚು ಇದೆಎಂಬುದನ್ನು ಪತ್ತೆ ಹಚ್ಚಲು ಗ್ರಾಪಂನಎಲ್ಲ ಸಿಬ್ಬಂದಿ ಶ್ರಮವಹಿಸಬೇಕು.ಜಲಜೀವನ ಮಿಷನ್‍ನಿಂದ ಹಾಕಿರುವ ನಳಗಳಿಗೆ ಹಳೆಯ ಒಎಚ್‍ಟಿಗಳಿಗೆ ಸಂಪರ್ಕಕಲ್ಪಿಸಬಾರದು. ಜೆಜೆಎಂನಿಂದಲೇಒಎಚ್‍ಟಿ ನಿರ್ಮಿಸಿ ಸಂಪರ್ಕ ಕಲ್ಪಿಸಿ ನೀರು ಪೂರೈಸಬೇಕು. ಹರಪನಹಳ್ಳಿಯ ಪ್ರತಿಗ್ರಾಪಂಗೆ ಭೇಟಿ ಮಾಡುತ್ತೇನೆ. ಎಲ್ಲಾದರೂಗುಂಡಿತೋಡಿ ನೀರು ಪಡೆಯುತ್ತಿದ್ದರೆ, ಅಂತಹ ಪೈಪ್‍ಲೈನ್‍ಕಂಡುಬಂದರೆ ನಾನಂತು ಸಹಿಸುವುದಿಲ್ಲ, ನಿರ್ಧಾಕ್ಷಿಣ್ಯವಾಗಿಕ್ರಮವಂತುಕಟ್ಟಿಟ್ಟಬುತ್ತಿಎಂದು ಪಿಡಿಒಗಳಿಗೆ ಸಿಇಒ ಸದಾಶಿವ ಪ್ರಭು ಎಚ್ಚರಿಸಿದರು.

ಬರೀ ನಂದಿಬೇವೂರುಮಾತ್ರವಲ್ಲ..
ನಂದಿಬೇವೂರುಗ್ರಾಪಂ ವ್ಯಾಪ್ತಿಯ ಕಣಿವಿಹಳ್ಳಿಯಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದಿವೆ. ಆದರೆ, ಉಳಿದ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ನಮ್ಮಗ್ರಾಪಂನಲ್ಲಿಯಾವುದೇ ಸಮಸ್ಯೆ ಬರಲ್ಲಎಂದುಕಣ್ಮುಚ್ಚಿ ಕುಳಿತರೆ ಆಗದು.ಅಪಾಯಬರೀ ನಂದಿಬೇವೂರು ಮಾತ್ರವಲ್ಲ..ಅಪಾಯಎಲ್ಲರ ಕಾಲಬುಡದಲ್ಲೇಇದೆ.ಆದ್ದರಿಂದಎಲ್ಲರೂಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಸಿಇಒ ಸದಾಶಿವಪ್ರಭು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಸುತ್ತಲೂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಅಂತವರಿಂದ ಸ್ವಚ್ಛತೆ ಹಾಗೂ ಕಸ ಕಂಡು ಬಂದರೆ ಮೊದಲು ನೋಟಿಸ್ ನೀಡಿ.ಎಚ್ಚೆತ್ತುಕೊಳ್ಳದಿದ್ದರೆ ಅಂತವರ ಅಂಗಡಿಗಳ ಲೈಸೆನ್ಸ್‍ರದ್ದು ಮಾಡಲು ಪಿಡಿಒಗಳಿಗೆ ಸೂಚನೆ ನೀಡಿದ್ದೇನೆ.
ಬಿ.ಸದಾಶಿವಪ್ರಭು, ಸಿಇಒ, ಜಿಲ್ಲಾ ಪಂಚಾಯಿತಿ ವಿಜಯನಗರ