ಪೈಪಲೈನ್ ಕಾಮಗಾರಿ ಪರೀಶೀಲನೆ ಮಾಡಿದ ಸಚಿವ ದರ್ಶನಾಪುರ

ಶಹಾಪೂರ :ಆ.20: ಭೀಮಾನದಿಯಿಂದ ಫಿಲ್ಟರ್ ಬೆಡ್‍ಗೆ ಬರುವ ಪೈಪ್ ಲೈನ್ ಕಾಮಗಾರಿ ಮತ್ತು ಹಳಿಸಗರದಲ್ಲಿರುವ ಚರಂಡಿ ಕಾಮಗಾರಿಯನ್ನು ಸಣ್ಣ ಕೈಗಾರಿಕೆ ಸಾರ್ವಜನಿಕ ಮಾಧ್ಯಮಗಳ ಮಂತ್ರಿ ಶರಣಬಸಪ್ಪಗೌಡ ದರ್ಶನಾಪುರವರು ವೀಕ್ಷಣೆ ಮಾಡಿ ಕಾಮಗಾರಿ ಪರೀಶೀಲನೆ ಮಾಡಿದರು. ಪೈಪಲೈನ್ ಕಾಮಗಾರಿಯಿಂದ ಜನ ಸಮಾನ್ಯರಿಗೆ ರಸ್ತೆಯಲ್ಲಿ ಅಲೆದಾಡಲು ಕಷ್ಟಕರವಾಗುತ್ತಿದ್ದು, ತಕ್ಷಣದಲ್ಲಿ ಡಾಂಬರಿಕರಣ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು, ಜನರಿಗೆ ಅನೂಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು. ಈ ಸಂಧರ್ಬದಲ್ಲಿ ಒಕ್ಕಲುತ್ತನ ಹುಟ್ಟುವಳಿ ಮಾಹಾಮಂಡಲದ ರಾಜ್ಯ ನಿರ್ದೇಶಕರಾದ ಗುರುನಾಥರಡ್ಡಿ ಪಾಟೀಲ್ ಹಳಿಸಗರ, ಪೌರಾಯುಕ್ತರಾದ ರಮೇಶ ಬಡಿಗೇರ, ಎಇಇ ನಾನಾಸಾಬ್, ಮುಖಂಡರಾದ ಮರೆಪ್ಪ ಕಟ್ಟಿಮನಿ, ರವಿ ಯಕ್ಕಿಂತಿ, ಶರಣಪ್ಪ ಮುಂಡಾಸ್, ಶಾಂತಪ್ಪ ಕಟ್ಟಿಮನಿ, ಹಣಮಂತ್ರಾಯ ಯಕ್ಷಂತಿ ಸೇರಿದಂತೆ ಇತರರು ಹಾಜರಿದ್ದರು.