ಪೈನಾಪಲ್ ಕೇಸರಿಬಾತ್

ಬೇಕಾಗುವ ಸಾಮಾಗ್ರಿಗಳು :

ಸಣ್ಣಗೆ ಹೆಚ್ಚಿದ ಪೈನಾಪಲ್
ಅರ್ಧ ಕಪ್ ಸಕ್ಕರೆ
ಮುಕ್ಕಾಲು ಕಪ್ ತುಪ್ಪ
ಗೋಡಂಬಿ
ಒಣದ್ರಾಕ್ಷಿ
ರವೆ
ನೀರು
ಕೇಸರಿ ದಳ
ಬೆಚ್ಚಗಿನ ಹಾಲು
ಏಲಕ್ಕಿ ಪುಡಿ

ಮಾಡುವ ವಿಧಾನ:

ಅರ್ಧ ಕಪ್ ಸಣ್ಣಗೆ ಹೆಚ್ಚಿದ ಪೈನಾಪಲ್ ತುಂಡುಗಳನ್ನು ಒಂದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ.
ಕಾಲು ಕಪ್ ಸಕ್ಕರೆಯನ್ನು ಕುಕ್ಕರಿಗೆ ಹಾಕಿ.ನಿಮ್ಮ ರುಚಿಯ ಪ್ರಕಾರ,ಸಕ್ಕರೆಯ ಪ್ರಮಾಣವನ್ನುಬದಲಾಯಿಸಿಕೊಳ್ಳಬಹುದು.
ಹಾಗೆಯೇ ಅರ್ಧ ಕಪ್ ನೀರನ್ನು ಹಾಕಿ.ದೊಡ್ಡ ಉರಿಯಲ್ಲಿ ಒಟ್ಟು ೩ ವಿಶಿಲ್ ಗಳು ಬರುವವರೆಗೆ ಬೇಯಿಸಿ.
ಒತ್ತಡ ಕಡಿಮೆಯಾದ ನಂತರ ಕುಕ್ಕರ್ ಮುಚ್ಚಳವನ್ನು ತೆರೆಯಿರಿ ಮತ್ತು ಬೇಯಿಸಿದ ಪೈನಾಪಲ್ ಅನ್ನು ಪಕ್ಕಕ್ಕೆಇರಿಸಿ.
ನಂತರ ಒಂದು ಪಾತ್ರೆಯಲ್ಲಿ ಅಥವಾ ಬಾಣಲೆಯಲ್ಲಿ ಕಾಲು ಕಪ್ ತುಪ್ಪವನ್ನು ಹಾಕಿ ಬಿಸಿ ಮಾಡಿ.

ಎರಡು ದೊಡ್ಡ ಚಮಚ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಬದಿಗೆ ತೆಗೆದಿಡಿ.ಉಳಿದ ತುಪ್ಪದಲ್ಲಿ ೧ ಕಪ್ ರವೆಯನ್ನು ಹುರಿಯಿರಿ.ರವೆಯನ್ನು ಸುಮಾರು ೬ ರಿಂದ ೭ ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ.

ಹುರಿದ ರವೆಯನ್ನು ಒಂದು ತಟ್ಟೆಗೆ ಹಾಕಿ.ನಂತರ ಒಂದು ಬೇರೆ ಪಾತ್ರೆಯಲ್ಲಿ ೨ ಕಪ್ ನೀರನ್ನು ಬಿಸಿಗೆ ಇಡಿ.

ನೀರು ಕುದಿಗೆ ಬಂದ ಮೇಲೆ ಹುರಿದರವೆಯನ್ನು ಹಾಕಿ ಹಾಗೂ ಕೈ ಬಿಡದೆ ಕಲಕುತ್ತಿರಿ.ಉಂಡೆಗಳು ಆಗದೆ ಇರುವ ತರಹ ನೋಡಿಕೊಳ್ಳಿ.

ಮುಚ್ಚಳವನ್ನು ಮುಚ್ಚಿ ಹಾಗೂ ಸಣ್ಣ ಉರಿಯಲ್ಲಿ ೨ ನಿಮಿಷಗಳ ವರೆಗೆ ಬೇಯಲು ಬಿಡಿ.ನಂತರ ಮುಚ್ಚಳವನ್ನುತೆಗೆದು ಮಿಶ್ರಣವನ್ನು ಕಲಕಿರಿ ಹಾಗೂ ಉಂಡೆಗಳು ಆಗದೆ ಇರುವ ತರಹ ನೋಡಿಕೊಳ್ಳಿ.ಈಗ ಅರ್ಧ ಕಪ್ ಸಕ್ಕರೆಯನ್ನು ಹಾಕಿ.

ಸಕ್ಕರೆಯ ಪಾಕದ ಜೊತೆ ಬೇಯಿಸಿದ ಪೈನಾಪಲ್ ಅನ್ನು ಹಾಕಿ.ಎಲ್ಲವನ್ನು ಚೆನ್ನಾಗಿ ಕಲಸಿ.ನಂತರ ಕಾಲು ಕಪ್ ತುಪ್ಪವನ್ನು ಸ್ವಲ್ಪ ? ಸ್ವಲ್ಪವೇ ಹಾಕಿ ಹಾಗೂ ಕೈ ಬಿಡದೆ ಕಲಕಿರಿ.

ಕೊನೆಯದಾಗಿ ಕಾಲು ಚಮಚ ಕೇಸರಿಯನ್ನು ಹಾಕಿ.ಕೇಸರಿ ದಳವನ್ನು ೩ ದೊಡ್ಡ ಚಮಚ ಬಿಸಿ ಹಾಲಿನಲ್ಲಿ ೫ನಿಮಿಷಗಳವರೆಗೆ ನೆನೆಸಿಟ್ಟಿರಬೇಕು.ಕೇಸರಿ ಹಾಕಿದ ನಂತರ ಮತ್ತೊಮ್ಮೆ ಚೆನ್ನಾಗಿ ಕಲಸಿ.ಉರಿಯನ್ನು ನಿಲ್ಲಿಸಿ ಹಾಗೂ ಅರ್ಧ ಚಮಚ ಏಲಕ್ಕಿ ಪುಡಿಯನ್ನು ಹಾಗೂ ತುಪ್ಪದಲ್ಲಿ ಹುರಿದಂತ ಗೋಡಂಬಿಹಾಗೂ ಒಣ ದ್ರಾಕ್ಷಿಯನ್ನು ಹಾಕಿ.ರುಚಿಕರ, ವರ್ಣರಂಜಿತ ಹಾಗೂ ಸುವಾಸನೆ ಭರಿತ ಅನಾನಸು ಕೇಸರಿಬಾತ್ ಸವಿಯಲು ಸಿದ್ದ