`ಪೈಟರ್’ ಟೀಸರ್ ಸದ್ದು

ಕೋವಿಡ್ ಪೂರ್ವದಲ್ಲಿ ಸೆಟ್ಟೇರಿದ್ದ “ಫೈಟರ್” ಚಿತ್ರ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಲೇಖಾ ಚಂದ್ರ ಮತ್ತು ಪಾವನಾ ಗೌಡ ನಾಯಕಿಯರಾಗಿ ಕಾಣಿಸಿಕೊಂಡಿದ್ದು ನೂತನ್ ಉಮೇಶ್ ಬಹು ನಿರೀಕ್ಷಿತ ಚಿತ್ರಕ್ಕೆ ಕೆ. ಸೋಮಶೇಖರ್ ಬಂಡವಾಳ ಹಾಕಿದ್ದಾರೆ.

ಚಿತ್ರದ ಟೀಸರ್ ಅನ್ನು ನಿರ್ಮಾಪಕರ ತಂದೆ ಬಿಡುಗಡೆ ಮಾಡಿ ಶುಭಹಾರೈಸಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ನೂತನ್ ಉಮೇಶ್, ಅಭಿಮಾನಿಗಳಿಂದ ಶೀರ್ಷಿಕೆ ಬಿಡುಗಡೆ ಮಾಡಲಾಗಿತ್ತು. ದರ್ಶನ್ ಅವರು ಮುಹೂರ್ತಕ್ಕೆ ಬಂದು ಚಿತ್ರತಂಡವನ್ನು ಹರಸಿದ್ದರು. ಚಿತ್ರ ಎಮೋಷನ್ ಮೇಲೆ ನಿಂತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರ ತಂದೆ ಅವರ ಬಳಿಯಿಂದ ಟೀಸರ್ ಬಿಡುಗಡೆ ಮಾಡಿಸಲಾಗಿದೆ. ಚಿತ್ರ ಹಲವು ಅಂಶಗಳನ್ನು ಹೊಂದಿದ್ದು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವುದು ಗ್ಯಾರಂಟಿ ಎಂದರು,

ನಟ ವಿನೋದ್ ಪ್ರಭಾಕರ್ ಮಾತನಾಡಿ, ಚಿತ್ರದಲ್ಲಿ ನನ್ನದು ಮೋಹಕ್ ಎನ್ನುವ ಪಾತ್ರ. ಒಳ್ಳೆಯ ಕಾರಣಕ್ಕಾಗಿ ಹೋರಾಡುವ ವ್ಯಕ್ತಿ. ಅದು ಯಾವ ಕಾರಣಕ್ಕೆ ಎನ್ನುವುದನ್ನು  ಚಿತ್ರದಲ್ಲಿ ನೋಡಬೇಕು.  ಅಕ್ಟೋಬರ್‍ನಲ್ಲಿ ತೆರೆಗೆ  ತರುವ ಉದ್ದೇಶವಿದೆ. ಚಿತ್ರದಲ್ಲಿ ಹಿರಿಯ ನಟಿ ನಿರೋಷ ಅವರು ಅಮ್ಮನ ಪಾತ್ರ ಮಾಡಿದ್ದಾರೆ.ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ ಉತ್ತಮವಾಗಿ ಮೂಡಿ ಬಂದಿದೆ.ಹರಸಿ ಹಾರೈಸಿ ಎಂದು ಕೇಳಿಕೊಂಡರು. ನಿರ್ಮಾಪಕ ಕೆ.ಸೋಮಶೇಖರ್ ಮಾತನಾಡಿ ಎಲ್ಲಾ ಚಿತ್ರಗಳಿಗೆ ನೀಡಿದ ಸಹಕಾರ ನಮ್ಮ ಚಿತ್ರಕ್ಕೂ ನೀಡಿ, ಹರಸಿ ಎಂದರು.

ನಟಿ ಲೇಖಾ ಚಂದ್ರ ಮಾತನಾಡಿ ಒಳ್ಳೆಯ ಪಾತ್ರವನ್ನು ತಂಡ ನೀಡಿದೆ. ಚಿತ್ರ ಬಿಡುಗಡೆಯಾದ ಮೇಲೆ ಎಲ್ಲರ ಮನಸ್ಸಿನಲ್ಲಿ ಉಳಿಯಲಿದೆ ಎಂದರೆ ಮತ್ತೊಬ್ಬ ನಟಿ ಪವಾನಾ ಗೌಡ ಹಳ್ಳಿ ಹುಡುಗಿಯ ಪಾತ್ರ. ಆದರೂ ಚಿತ್ರದಲ್ಲಿ ಚೆನ್ನಾಗಿಯೇ ತೋರಿಸಿದ್ದಾರೆ ಎಂದರು.

ಹಿರಿಯ ನಟಿ ನಿರೋಷಾ ಮಾತನಾಡಿ, ಬಹಳ ವರ್ಷಗಳ ನಂತರ ಕನ್ನಡಕ್ಕೆ ಬಂದಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ. ಮುಂದಿನ ಬಾರಿ ಸಂಪೂರ್ಣ ಕನ್ನಡದಲ್ಲಿಯೇ ಮಾತನಾಡುವೆ. ಕನ್ನಡ ಚಿತ್ರರಂಗ ಆರಂಭದಲ್ಲಿ ಬೆಳೆಸಿದೆ. ಈ ಬಗ್ಗೆ ಕೃತಜ್ಞತೆ ಇದೆ ಎಂದು ಹೇಳಿದರು.

ರಾಜ್ ದೀಪಕ್ ಶೆಟ್ಟಿ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ದೇನೆ. ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತಿತರರ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಸಂಗೀತ ನೀಡಿರುವ ಗುರುಕಿರಣ್,  ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.