ಪೈಝರ್ ಲಸಿಕೆ ಶೇ.100 ರಷ್ಟು ಯಶಸ್ವಿ

ಬರ್ಲಿನ್, ಮಾ.31 – ಬಯೋನ್ ಟೆಕ್ ಮತ್ತು ಫೈಝರ್ ಸಂಸ್ಥೆಯ ಕೊರೋನಾ‌ ಸೋಂಕಿನ ಲಸಿಕೆ 12 ರಿಂದ 15 ವರ್ಷದ ಮಕ್ಕಳಲ್ಲಿ ಶೇ.100 ರಷ್ಟು ಯಶಸ್ವಿಯಾಗಿದೆ.

ಮೂರನೇ ಹಂತದ ಪ್ರಯೋಗದಲ್ಲಿ 2260 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.ಅದರ ಫಲಿತಾಂಶ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎನ್ನುವ ಅಧ್ಯಯನದ ವರದಿಯನ್ನು ಬಹಿರಂಗ ಪಡಿಸಲಾಗಿದೆ‌

ಅಮೆರಿಕದಲ್ಲಿ 2,260 ಮಕ್ಕಳ ಮೇಲೆ ಪರೀಕ್ಷೆ ನಡೆಸಲಾಗಿತ್ತು ಪರೀಕ್ಷೆಯ ಆಧಾರದ ಮೇಲೆ ಮೂರನೇ ಹಂತದ ವರದಿಯನ್ನು ಬಯೋನ್ ಟಕ್ ಸಂಸ್ಥೆ ಬಿಡುಗಡೆ ಮಾಡಿದೆ.

ಕೋವಿಡ್ ಸೋಂಕು ವಿರುದ್ದ ಹೋರಾಟದಲ್ಲಿ ಫೈಜರ್ ಸಂಸ್ಥೆಯ ಲಸಿಕೆ ಕ್ಷೇತ್ರ 100ರಷ್ಟು ಸಂಪೂರ್ಣ ಯಶಸ್ವಿಯಾಗಿದೆ ಹೇಗಿದೆ ಎಂದು ತಿಳಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೂ ಮುನ್ನವೇ ಈ ಸಕಾರಾತ್ಮಕ ವರದಿಯನ್ನು ಬಹಿರಂಗ ಪಡಿಸುವುದು ಶಾಲೆಗೆ ಹೋಗಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಂತಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತದೆ ಇದರ ನಡುವೆಯೇ ಲಸಿಕೆ ಹಾಕುವ ಕಾರ್ಯ ಜಗತ್ತಿನ ವಿವಿಧ ದೇಶಗಳಿಂದ ನಡೆಯುತ್ತಿದೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಪ್ರಗತಿಯಲ್ಲಿರುವ ಅನೇಕ ಲಸಿಕೆಗಳು 23 ಪ್ರಯೋಗದಲ್ಲಿವೆ. ಆ ಪ್ರಯೋಗದ ವರದಿಗಳಲ್ಲಿ ಕೆಲವು ಅಂತಿಮ ಹಂತಕ್ಕೆ ಬಂದಿವೆ ಎಂದು ತಜ್ಞರು ಹೇಳಿದ್ದಾರೆ

ಫೈಜರ್ ಸಂಸ್ಥೆ ತಾನು ಅಭಿವೃದ್ಧಿಪಡಿಸಿರುವ ಲಸಿಕೆ 12ರಿಂದ 15 ವರ್ಷದ ಮಕ್ಕಳಿಗೆ ತುಂಬಾ ಸುರಕ್ಷಿತ ಎನ್ನುವ ಸಕಾರಾತ್ಮಕ ಮಾಹಿತಿಯನ್ನು ಹೊರಹಾಕಿದೆ