ಪೇಶ್ ಇಮಾಮ್‍ರಿಗೆ ನೆರವು ಸ್ವಾಗತಾರ್ಹ : ಸದ್ದಾಮ್

ಕಲಬುರಗಿ:ಜೂ.5: ಕೋವಿಡ್‍ನ ಎರಡನೇಯ ಅಲೆಯಲ್ಲಿ ಬಹಳಕಷ್ಟು ಸಂಕಷ್ಟ ಜೀವನ ಸಾಗಿಸತ್ತಿದ್ದ ಮಾಸೀದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇಶ್ ಇಮಾಮ್ ಹಾಗೂ ಮೌಸಮ್ ಗಳಿಗೆ ಸರ್ಕಾರದಿಂದ ನೆರವು ಘೋಷಿಸಿರುವುದಕ್ಕೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದಿ ನಿಗಮದ ರಾಜ್ಯ ನಿರ್ದೇಶಕ ಸದ್ದಾಮ್ ವಜೀರಗಾಂವ್ ಅವರು ಸ್ವಾಗತಿಸಿದ್ದಾರೆ.

ಈ ಕುರಿತಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋವಿಡ್ ಭೀತಿಯಿಂದಾಗಿ ತತ್ತರಿಸಿದ್ದ ಜನತೆಗೆ ಮೊದಲ ಕಂತಿನಲ್ಲಿ ಪ್ಯಾಕೇಜ್‍ಘೋಷಣೆ ಮಾಡಿದ್ದರು. ಇದೀಗ ಇನ್ನಿತರ ಉಳಿದ ವರ್ಗಗಳಿಗೆ 2ನೇ ಕಂತಿನಲ್ಲಿ ಆರ್ಥಿಕವಾಗಿ ನೆರವು ನೀಡಿದ್ದಲ್ಲದೇ ಪೇಶ್ ಇಮಾಮ್ ಮತ್ತು ಮೌಸಮ ಗಳಿಗೂ ಸಿಎಂ ರವರು 3000 ರೂ. ಸಹಾಯಧನ ನೀಡುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಸದ್ದಾಮ್ ವಜೀರಗಾಂವ್ ತಿಳಿಸಿದ್ದಾರೆ.