ಪೇಶಾವರಿ ಚಿಕನ್

ಬೇಕಾಗುವ ಸಾಮಗ್ರಿಗಳು

*ಚಿಕನ್ ಪೀಸ್ – ೧/೪ ಕೆ.ಜಿ
*ಹಸಿರು ಮೆಣಸಿನಕಾಯಿ – ೫
*ಕಾಳು ಮೆಣಸು – ೨ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ನೀರು – ೨೦೦ ಮಿ.ಲೀ
*ತುಪ್ಪ – ೪ ಚಮಚ
*ಶುಂಠಿ ತುರಿ – ೨ ಚಮಚ
*ಟೊಮೆಟೋ – ೨
*ಬೆಳ್ಳುಳ್ಳಿ – ೨ ಜಜ್ಜಿರುವುದು
*ಉಪ್ಪು – ೨ ಚಮಚ
*ಎಣ್ಣೆ – ೧೦೦ ಮಿ.ಲೀ

ಮಾಡುವ ವಿಧಾನ :

ಕಾಳು ಮೆಣಸನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪ್ಯಾನಿಗೆ ತುಪ್ಪ, ಎಣ್ಣೆ ಹಾಕಿ. ಅದು ಬಿಸಿಯಾದ ಮೇಲೆ ಬೆಳ್ಳುಳ್ಳಿ, ಶುಂಠಿ ತುರಿ ಹಾಕಿ ಫ್ರೈ ಮಾಡಿ. ಇದಕ್ಕೆ ಚಿಕ್ಕದಾಗಿ ಟೊಮೆಟೋ, ಚಿಕನ್ ಹಾಕಿ ಹುರಿದು ಕೊಳ್ಳಿ. ಉದ್ದಕ್ಕೆ ಕಟ್ ಮಾಡಿದ ಹಸಿರು ಮೆಣಸಿನಕಾಯಿ, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿದರೆ ಪೇಶಾವರಿ ಚಿಕನ್ ಸಿದ್ಧ.