ಪೇರಳೆ ಹಣ್ಣಿನ ಪ್ರಯೋಜನಗಳು

ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ಪೇರಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್ ಕಾರಣದಿಂದಾಗಿ, ಮಧುಮೇಹವನ್ನು ನಿಯಂತ್ರಿಸಬಹುದು. ಪೇರಳೆ ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಇರುತ್ತದೆ. ಇದು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.
ಮಲಬದ್ದತೆಯ ರೋಗಿಗಳಿಗೆ ಇದು ಸಹಾಯಕ. ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದರೆ ಮಲಬದ್ದತೆಯ ಸಮಸ್ಯೆ ಕೂಡ ಇರುವುದಿಲ್ಲ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಪೇರಳೆ ಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದೆ ಪೇರಳೆಯಲ್ಲಿ ನಾಲ್ಕು ಪಟ್ಟು ವಿಟಮಿನ್ ಸಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಕಣ್ಣುಗಳನ್ನು ಆರೋಗ್ಯವಾಗಿಡಲು ಪೇರಳೆ ಹಣ್ಣನ್ನು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ವಿಟಾಮಿನ್ ಎ ಈ ಹಣ್ಣಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಪೇರಳೆ ಸೇವನೆಯಿಂದ ದೃಷ್ಟಿಯ ಸಮಸ್ಯೆಯನ್ನು ತಪ್ಪಿಸಬಹುದು.