ಲಕ್ಷ್ಮೇಶ್ವರ,ಜೂ.28: ತಾಲೂಕಿನ ಲಕ್ಷ್ಮೇಶ್ವರದ ಗುಂಜಳ ರಸ್ತೆಯಲ್ಲಿರುವ ಪರಮೇಶ್ವರಪ್ಪ ಅಂದಲಗಿ ಎಂಬವರ ಎರಡು ಎಕರೆ ತೋಟದಲ್ಲಿ ಬೆಳೆದ ಪೇರಲಗಿಡದಲ್ಲಿನ ಹಣ್ಣುಗಳು ಉದುರುತ್ತಿದ್ದು ಇದರಿಂದಾಗಿ ರೈತ ಕಂಗಾಲಾಗಿದ್ದಾನೆ.
ತೋಟದಲ್ಲಿ 350 ಪೇರಲ ಗಿಡ 450 ಮಹಾಗನಿ ಸಸಿಗಳು 300 ಶ್ರೀಗಂಧದ ಮರ 50 ಬೆಟ್ಟದನಲ್ಲಿ 200 ನುಗ್ಗೆ ಗಿಡ 50 ತೆಂಗಿನ ಗಿಡಗಳು ತೋಟದಲ್ಲಿವೆ . ಇವುಗಳನ್ನು ನಾಟಿ ಮಾಡಿ ಬೆಳೆಸಲು ಸುಮಾರು 3 ಲಕ್ಷ ರೂ ಖರ್ಚು ಮಾಡಿದ್ದು ಈಗ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು ಕಳೆದ ವರ್ಷಪೇರಲ ಗಿಡಗಳು ಹಣ್ಣುಗಳನ್ನು ಬಿಟ್ಟಿದ್ದವು ಈ ಬಾರಿ ಸಾಕಷ್ಟು ಹಣ್ಣುಗಳು ಬಿಟ್ಟಿದ್ದರು ಅನೇಕ ರೋಗಗಳಿಗೆ ತುತ್ತಾಗಿ ಗಿಡದ ಸುತ್ತಲೂ ಉದುರಿ ಬೀಳುತ್ತಿವೆ ಕೈಯಲ್ಲಿ ಹಣ್ಣುಗಳನ್ನು ಹಿಡಿಯಲು ಸಾಧ್ಯವಾಗದಷ್ಟು ಕೊಳೆಯುತ್ತಿವೆ ಪ್ರತಿ ಗಿಡದ ಸುತ್ತಲೂ ನೂರಾರು ಹಣ್ಣುಗಳು ಕೊಳೆತು ನಾರುತ್ತಿವೆ.
ರೈತ ರಾಜು ಅಂದಲಗಿ ಅವರು ಸಾವಯವ ಪದ್ಧತಿಯ ಮೂಲಕ ರೋಗ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರು ಯಾವುದೇ ಫಲ ಸಿಕ್ಕಿಲ್ಲ ಈ ಬಾರಿ ಸಾಕಷ್ಟು ಹಣ್ಣುಗಳು ಬಿಟ್ಟಿದ್ದರೂ ನಿರರ್ಥಕವಾಗಿದೆ.
ಸಸಿಗಳನ್ನು ದೂರದ ದಾವಣಗೆರೆ ಮತ್ತು ತಾಲೂಕಿನ ಅರಣ್ಯ ಇಲಾಖೆಯಿಂದ ಪೇರಲ ಗಿಡ ತಂದು ನಾಟಿ ಮಾಡಿದ್ದು ಈ ವರ್ಷ ಸಾಕಷ್ಟು ಇಳುವರಿ ಇದ್ದರು ವ್ಯರ್ಥವಾಗಿದೆ ಎಂಬ ನೋವು ರೈತನನ್ನು ಕಾಡುತ್ತಿದೆ.
ಈ ಕುರಿತು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರು ಈ ರೋಗ ನಿಯಂತ್ರಣಕ್ಕೆ 25 ಎಂಎಲ್ ಕ್ಲೋರೋಶಿಯಂ ಪಾಸ್ 10 ಗ್ರಾಂ ಕಾರ್ಬನ್ ದುಜಂ 25 mಟ ಬೇವಿನ ಎಣ್ಣೆ ಮತ್ತು 100 ಗ್ರಾಂ ಮೀನನ ಎಣ್ಣೆ ಸೇರಿಸಿ 7 ದಿನಗಳ ಕಾಲ ಸಿಂಪಡಣೆ ಮಾಡಬೇಕು ಎಂದು ಹೇಳಿದರು.