ಪೇದೆ ಮಯೂರ್ ಸಾವು; ರಾಜಕೀಯ ಬೇಡ: ಅಜಯಸಿಂಗ್

ಕಲಬುರಗಿ,ಜೂ.23-ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಇತ್ತೀಚೆಗೆ ನಡೆದ ಪೇದೆ ಮಯೂರ್ ಚವ್ಹಾಣ್ ದುರಂತ ಸಾವು ಕುರಿತಂತೆ ತನಿಖೆ ನಡೆಯುತ್ತಿದ್ದು, ಅನಗತ್ಯವಾಗಿ ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಜೇವರ್ಗಿ ಶಾಸಕ ಹಾಗೂ ಮಾಜಿ ಸಚೇತಕ ಡಾ.ಅಜಯಸಿಂಗ್ ಸಲಹೆ ನೀಡಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ರಾಜಕೀಯ ಬೆರೆಸಬಾರದು ಎಂದರು.
ಪೆÇಲೀಸ್ ಪೇದೆ ಮಯೂರ್ ಚವ್ಹಾಣ್ ದುರಂತ ಸಾವಿನ ಬಳಿಕ ಪ್ರಮುಖ ಆರೋಪಿ ಸಾಯಬಣ್ಣ ಕರಜಗಿಯನ್ನು ಬಂಧಿಸಿ ಕರೆ ತರುವಾಗ ಆತ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಪಾಕೆಟ್ ಚಾಕುವಿಂದ ಪೆÇಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಸ್ವಯಂ ರಕ್ಷಣೆಗಾಗಿ ಪೆÇಲೀಸರು ಆತನಿಗೆ ಗುಂಡು ಹೊಡೆದಿದ್ದಾರೆಯೇ ಹೊರತು; ಆತನ ಜಾತಿ ಅಥವಾ ಧರ್ಮ ನೋಡಿ ಗುಂಡು ಹಾರಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇನ್ನು, ಗುಂಡೇಟಿನಿಂದ ಗಾಯಗೊಂಡಿರುವ ಸಾಯಬಣ್ಣನ ಮುಖವನ್ನೇ ತಾವು ನೋಡಿಲ್ಲ. ತಮ್ಮೊಂದಿಗೆ ಆತ ಇರುವ ಒಂದಾದರೂ ಫೆÇೀಟೊ ತೋರಿಸಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಯೂರ್ ಚವ್ಹಾಣ್ ದುರಂತ ಸಾವಿನ ಕುರಿತಂತೆ ಬಿಜೆಪಿ ಮುಖಂಡರ ಒತ್ತಾಯಕ್ಕೆ ಅನುಗುಣವಾಗಿ ನ್ಯಾಯಾಂಗ ತನಿಖೆ ನಡೆಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪೆÇಲೀಸ್ ಇಲಾಖೆ ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ ಎಂದು ಸಮಜಾಯಿಷಿ ನೀಡಿದರು.

ರೂ.50 ಲಕ್ಷ ಪರಿಹಾರಕ್ಕೆ ಒತ್ತಾಯ
ಮೃತ ಪೇದೆ ಮಯೂರ್ ಚವ್ಹಾಣ್ ಸಂತ್ರಸ್ತ ಕುಟುಂಬಕ್ಕೆ ಈಗ ಘೋಷಿಸಿರುವ ರೂ.30 ಲಕ್ಷದ ಬದಲು ರೂ.50 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಕೋರಲಾಗುವುದು ಎಂದು ಡಾ.ಅಜಯ್ ಹೇಳಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಕಾಂಗ್ರೆಸ್ ಮುಖಂಡ ನೀಲಕಂಠ ಮುಲಗೆ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ವಿಜಯ್ ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಸ್ಪಷ್ಟ ಮರಳು ನೀತಿಗೆ ಆಗ್ರಹ
ಮನೆ ನಿರ್ಮಾಣ ಸೇರಿದಂತೆ ರಾಜ್ಯ ಸರಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಮರಳು ಲಭಿಸುವಂತೆ ರಾಜ್ಯದಲ್ಲಿ ಸ್ಪಷ್ಟ ಮರಳು ನೀತಿ ರೂಪಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕ ಡಾ.ಅಜಯಸಿಂಗ್ ಭರವಸೆ ನುಡಿದರು.

ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದ ಪೇದೆ ಮಯೂರ್ ಚವ್ಹಾಣ್ ದುರಂತ ಸಾವಿನ ಬಳಿಕ ಜಿಲ್ಲೆಯಲ್ಲಿ ಮರಳು ಲಭ್ಯತೆ ಸಮಸ್ಯೆ ಕಾಡುತ್ತಿದೆ. ಸದ್ಯಕ್ಕೆ ಒಂದು ಟ್ರಿಪ್ ಮರಳಿಗೆ ರೂ.80 ಸಾವಿರ ನೀಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಶಾಸಕ ಅಜಯ್ ಹೀಗೆ ಆಶ್ವಾಸನೆ ನೀಡಿದರು.

ನನಗೆ ಹುದ್ದೆ ಮುಖ್ಯ ಅಲ್ಲ
“ಸತತ ಮೂರನೇ ಬಾರಿ ಶಾಸಕನಾಗಿ ಆಯ್ಕೆಗೊಂಡಿದ್ದು ಈ ಬಾರಿ ಖಚಿತವಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು. ಆದರೂ ಕಾರಣಾಂತರಗಳಿಂದ ಸಿಕ್ಕಿಲ್ಲ. ಹಾಗಂತ ನನಗೆ ಬೇಸರವೂ ಇಲ್ಲ. ನನಗೆ ಹುದ್ದೆ ಮುಖ್ಯ ಅಲ್ಲ” ಎಂದು ಶಾಸಕ ಅಜಯಸಿಂಗ್ ನುಡಿದರು.
ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಈ ಕುರಿತು ಪ್ರತಿಕ್ರಯಿಸಿದ ಅಜಯ ಸಿಂಗ್, “ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧ” ಎಂದರು.
ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಸ್ಥಾನವನ್ನು ಕ್ಯಾಬಿನೆಟ್ ದರ್ಜೆ ಸಚಿವರಿಗೇ ನೀಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸುತ್ತಿದ್ದಾಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಮಿಂಚಿನಂತೆ ಪ್ರತಿಕ್ರಿಯಿಸಿದ ಡಾ.ಸಿಂಗ್, “ಈ ಪ್ರಶ್ನೆ ಸಚಿವರಿಗೇ ಕೇಳಿ” ಎಂದು ಮುಗುಳ್ನಕ್ಕರು.