ಪೇದೆ ಬಲರಾಮ ರಜಪೂತಗೆ ಸಿಎಂ ಪದಕ

ಆಳಂದ ;ಎ.7:ಕಲಬುರಗಿಯ ಸಿ.ಡಿ.ಆರ್ ಘಟಕ, ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ತಾಲೂಕಿನ ಖಜೂರಿ ಗ್ರಾಮದ ಪೇದೆ ಬಲರಾಮ ರಜಪೂತ ಅವರಿಗೆ ಮುಖ್ಯಮಂತ್ರಿಗಳ ಪದಕ ದೊರೆತಿದೆ.

ಪೇದೆ ಬಲರಾಮ ಅವರು ಕಲಬುರಗಿ ಜಿಲ್ಲೆಯಲ್ಲಿ ಘಟಿಸಿರುವ ಘೋರ ಸ್ವತ್ತಿನ ಪ್ರಕರಣಗಳು ಹಾಗೂ ಅಪರಿಚಿತ ಕೊಲೆ ಪ್ರಕರಣಗಳು ಮತ್ತು ಇನ್ನಿತರ ಘೋರ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಅಲ್ಲದೇ ಸೇವಾ ಅವಧಿಯಲ್ಲಿ ಅತ್ತ್ಯುತ್ತಮ ಕೆಲಸ ನಿರ್ವಹಿಸಿದಕ್ಕೆ 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕ ದೊರೆತಿದೆ.

ಗ್ರಾಮದ ಬಲರಾಮ ರಜಪೂತ ಅವರಿಗೆ ಪದಕ ದೊರೆತಿರುವುದಕ್ಕೆ ಸ್ವಗ್ರಾಮ ಖಜೂರಿಯ ಚಂದ್ರಕಾಂತ ವಾಡೆ, ಹಣಮಂತ ತೋರಕಡೆ, ಸೂರ್ಯಕಾಂತ ಗುಂಜೊಟೆ, ಸಂಜಯಕುಮಾರ ಹೊಸಮನಿ, ಶಿವಶಾಂತ ಬಂಗರಗೆ, ಚೆನ್ನಬಸಪ್ಪ ಭೂಸುಣೆಗೆ, ಗುಂಡಪ್ಪ ಶೇರಿ, ಕುಮಾರ ಬಂಡೆ, ಹಣಮಂತ ಶೇರಿ ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.