ಪೇಟ್ರೋಲ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‍ನಿಂದ ಪ್ರತಿಭಟನೆ

ಇಂಡಿ :ಜೂ.9: ಪೆಟ್ರೋಲ, ಡೀಸೇಲ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಮಂಗಳವಾರ ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ನೈತೃತ್ವದಲ್ಲಿ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ತಹಶೀಲ್ದಾರ ಚಿದಂಬರಂ ಕುಲಕರ್ಣಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಮಾತನಾಡಿ ಕೇಂದ್ರ ಬಿಜೆಪಿ ಸರಕಾರದ ಸುಳ್ಳಿನ ಕಂತೆ ಕಟ್ಟಿಕೊಂಡು ಜನರಿಗೆ ದಾರಿ ತಪ್ಪಿಸುತ್ತಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೋಂದು ದರದಲ್ಲಿ ಕಡಿಮೆ ಮಾಡಲಾಗುವುದು ಎಂದಿದ್ದಾರೆ. ಅಧಿಕಾರಕ್ಕೆ ಬರುವಕ್ಕಿಂತ ಮುಂಚ್ಚೇ ಪೇಟ್ರೋಲ, ಡೀಸೇಲ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನತೆಗೆ ಆಸ್ವಾನೆ ನೀಡಿದ್ದಾರೆ ಆದರೆ ಪೇಟ್ರೋಲ ,ಡಿಸೇಲ ಬೆಲೆ ಗಣನೀಯ ಏರಿಕೆ ಮಾಡಿರುವುದು ವಿಷಾದನೀಯ ಸಂಗತಿ.

ದೇಶದಲ್ಲಿ ಕರೋನಾ ರೋಗ ಬಾಧೆಯಿಂದ ಸಾಕಷ್ಟು ಜನರು ತೊಂದರೆ ಅನುಭವಿಸಿದ್ದಾರೆ. ಇಂತಹ ಸಂದ್ಗಿದ ಸಂದರ್ಭದಲ್ಲಿ ಪೇಟ್ರೋಲ,ಡೀಸೆಲ ಬೆಲೆ ಏರಿಕೆ ಮಾಡಿರುವದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಅಚ್ಚೇ ದೀನ ಬರತ್ತದೆ ಎಂದು ದೇಶದ ಜನರು ಕಾತರದಿಂದ ಕಾದರೂ ಕೆಟ್ಟದಿನಗಳೆ ಬಂದಿವೆ ವಿನಹ: ಬಡವರಿಗೆ ,ರೈತರಿಗೆ ,ದೀನ ದುರ್ಬಲರಿಗೆ ಒಳ್ಳೆಯ ಕಾಲ ಬರಲೆ ಇಲ್ಲ .

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಸರಕಾರಗಳು ಇರಬೇಕು. ಇಂತಹ ಜನವಿರೋಧಿ ಸರಕಾರಗಳು ದೇಶಕ್ಕೆ ಮಾರಕ ಕೂಡಲೆ ಸರಕಾರ ಪೇಟ್ರೋಲ ,.ಡೀಸೆಲ ಬೆಲೆ ಕಡಿಮೆ ಮಾಡಬೇಕು. ಇದನ್ನೆ ಮುಂದೆ ವರೆಸಿದರೆ ಹೋರಾಟ ಮಾಡಲಾಗುವುದು ಎಂದು ಸರಕಾರದ ವಿರುಧ್ಧ ಮಾತನಾಡಿದರು.

ಸಿಐಟಿಯು ಸಂಘಟನೆ ಭಾರತಿ ವಾಲಿ,ಸಿದ್ದು ಡಂಗಾ,ಮಹಿಬೂಬ ಬೇನೂರ, ಭರಮಣ್ಣಾ ಹನ್ನೂರ, ರಫೀಕ ಸೋಡೇವಾಲೆ,ಆಬುಬಕರ್ ತಾಂಬೋಳಿ, ನಿಯಾಜ ಅಗರಖೇಡ, ಮಕ್ಬುಲ ಸೈಯದ್, ಶೋಭಾ ಕುಂಬಾರ, ಹುಸೇನಿ ಸೈಯದ್ , ವೈಷ್ಣವಿ ಉಮರ್ಜಿ, ಶಾರದಾ ತಾಂಬೆ, ಬಿ.ಎಲ್.ರಾಠೋಡ,ಬಾಬು ಮೇತ್ರಿ ಇತರರು ಈ ಸಂದರ್ಭದಲ್ಲಿ ಇದ್ದರು.